ಉಡುಪಿ| ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಗೆ ದಿಢೀರ್ ಭೇಟಿ ನೀಡಿದ ಪೊಲೀಸರು..! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶರಣಪ್ಪ ಅರೆಸ್ಟ್...!!

  • 23 Jan 2025 03:18:23 PM

ಉಡುಪಿ : ಇತ್ತೀಚಿನ ದಿನಗಳಲ್ಲಿ ಜನ ಹಣಕ್ಕಾಗಿ ಮಾನವನ್ನೂ ಹರಾಜಿಗಿಡುವ ನೀಚ ಸ್ಥಿತಿಗೆ ಬಂದು ತಲುಪಿದ್ದಾರೆ. ಹಣದ ವ್ಯಾಮೋಹಕ್ಕೆ ಒಳಗಾಗಿ ಇಂದು ಪ್ರತೀ ಸಂಬಂಧ, ಶೀಲ ವ್ಯವಹಾರದ ಮಾನದಂಡವಾಗಿ ಬಿಟ್ಟಿದೆ. ಜನಸಾಮಾನ್ಯರಲ್ಲಿ ಹೊಲಸು ಮನಸ್ಥಿತಿ ಮನೆ ಮಾಡಿಬಿಟ್ಟಿದೆ. ವೇಶ್ಯಾವಾಟಿಕೆಯಂತಹ ದಂಧೆಗಳು ಕಾನೂನಿನ ಭಯವಿಲ್ಲದೆ ಎಲ್ಲೆಡೆ ನಡೆಯುತ್ತಲೇ ಇದೆ. ಇದೀಗ ಉಡುಪಿಯ ಲಾಡ್ಜೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. 

 

ಖಚಿತ ಮಾಹಿತಿ ಮೇರೆಗೆ ಲಾಡ್ಜ್ ಗೆ ಎಂಟ್ರಿ ಕೊಟ್ಟ ಪೊಲೀಸರು..!

 

ಪರ್ಕಳದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಶರಣಪ್ಪ ಬಂಧಿತ ಆರೋಪಿಯಾಗಿದ್ದು ಈತನೊಂದಿಗಿದ್ದ ಮಹಿಳೆಯನ್ನು ಬಚಾವ್ ಮಾಡಲಾಗಿದೆ. 

 

ಲಾಡ್ಜ್ ನಲ್ಲಿ ಅಕ್ರಮ ಲಾಭಕ್ಕಾಗಿ ನಡೆಯುತ್ತಿತ್ತು ಅನೈತಿಕ ದಂಧೆ...!

 

ಪರ್ಕಳದ ಬಸ್ ಸ್ಟ್ಯಾಂಡ್ ನ ಹಿಂಭಾಗದಲ್ಲಿರುವ ಲಾಡ್ಜ್ ವೊಂದರಲ್ಲಿ ಅಕ್ರಮ ಲಾಭಕ್ಕಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಇರಿಸಿಕೊಂಡಿದ್ದರ ಬಗ್ಗೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರಿಗೆ ಮಾಹಿತಿ ದೊರೆತ ಬೆನ್ನಲ್ಲೇ ಪೊಲೀಸರು ಲಾಡ್ಜ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.