ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಭಾಗವಹಿಸಿದ ಯು.ಟಿ.ಖಾದರ್!;ಫೋಟೋ ವೈರಲ್!

  • 25 Jan 2025 10:54:56 AM

ಉತ್ತರ ಪ್ರದೇಶ: ಪ್ರಯಾಗ್ ರಾಜ್ ನಲ್ಲಿ ಅದ್ದೂರಿಯಾಗಿ 144 ವರ್ಷಗಳಿಗೆ ಒಂದು ಬಾರಿ ನಡೆಯುವ ಮಹಾನ್ ಕುಂಭಮೇಳದಲ್ಲಿ ಇಡೀ ಜಗತ್ತಿನ ಕೋಟ್ಯಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದಾರೆ, ಈ ಅಪರೂಪದ ಕ್ಷಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ಉ.ಪ್ರದೇಶದ ಸ್ಪೀಕರ್ ಆಹ್ವಾನ!

 

ಉತ್ತರ ಪ್ರದೇಶದ ವಿಧಾನಸಭಾ ಅಧ್ಯಕ್ಷ ಸತೀಶ್ ಅವರು ಯು.ಟಿ ಖಾದರ್ ಅವರಿಗೆ ಮಹಾಕುಂಭಮೇಳಕ್ಕೆ ಆಹ್ವಾನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಸನಾತನ ಹಿಂದೂ ಧರ್ಮದ ಉತ್ಸವದಲ್ಲಿ ಖಾದರ್ ಪಾಲ್ಗೊಂಡಿದ್ದಾರೆ. ಪ್ರಯಾಗ್ ರಾಜ್ ಸಹಾಯಕ ಆಯುಕ್ತರು ಖಾದರ್ ಅವರಿಗೆ ಅದ್ದೂರಿ ಸ್ವಾಗತ ಏರ್ಪಡಿಸಿದ್ದರು.

 

ಫೋಟೋ ವೈರಲ್!

 

ಉತ್ತರ ಪ್ರದೇಶದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯು.ಟಿ ಖಾದರ್ ಆ ಬಳಿಕ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದಾರೆ‌. ಓರ್ವ ಮುಸ್ಲಿಂ ಆಗಿರುವ ಖಾದರ್ ಹಿಂದೂ ಧರ್ಮದ ಮಹಾನ್ ಉತ್ಸವದಲ್ಲಿ ಪಾಲ್ಗೊಂಡಿರುವ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.