ಸಮಾಜದಲ್ಲಿ ಪ್ರತೀದಿನ ಅನೇಕ ದುಷ್ಕೃತ್ಯಗಳು ನಡೆಯುತ್ತಲೇ ಇದೆ. ಮಾನವೀಯತೆಯೇ ಸತ್ತು ಹೋಗಿದೆ ಎನ್ನುವ ರೀತಿಯಲ್ಲಿ ಮಾನವರು ಪಶುಗಳಿಗಿಂತಲೂ ಕೀಳಾಗಿ ವರ್ತಿಸುತ್ತಿದ್ದಾರೆ. ವಸುಧೈವ ಕುಟುಂಬಕಂ ಎಂಬ ಮಾತು ಅನುಷ್ಠಾನದಲ್ಲಿಲ್ಲ.
ಕೌಟುಂಬಿಕ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಬಿಟ್ಟಿದೆ. ಇದೀಗ ನಿವೃತ್ತ ಯೋಧನಾಗಿದ್ದರೂ ಈತ ಮಾಡಿದ ಕೃತ್ಯ ಕೇಳಿದ್ರೆ ನೀವು ನಿಬ್ಬೆರಗಾಗೋದು ಮಾತ್ರ ಗ್ಯಾರಂಟಿ...!
ಪತ್ನಿಯನ್ನು ಕೊಲೆಗೈದು ಕುಕ್ಕರ್ ನಲ್ಲಿ ಬೇಯಿಸಿದ ಪತಿ..!
ಹೌದು. ತಾಳಿ ಕಟ್ಟಿದ ಗಂಡನೋರ್ವ ಪತ್ನಿಯನ್ನು ಕೊಲೆಗೈದು ತುಂಡು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಹೃದಯವಿದ್ರಾವಕ ಘಟನೆ ರಂಗಾರೆಡ್ಡಿ ವೆಂಕಟರಮಣ ಕಾಲೋನಿಯಲ್ಲಿ ನಡೆದಿದೆ. ಪತಿ ಗುರುಮೂರ್ತಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ತನ್ನ ತಾಯಿಯ ಜೊತೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪ್ರಸ್ತುತ ಕಾಂಚನ್ ಭಾಗ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹದಿಮೂರು ವರ್ಷದ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ನಡುವೆ ನಡೆದ ಗಲಾಟೆ ಪತ್ನಿಯ ಕೊಲೆಯಲ್ಲಿ ಅಂತ್ಯ ಕಂಡಿದೆ ಎಂದು ತಿಳಿದುಬಂದಿದೆ.
ದೂರು ನೀಡಿದ ವ್ಯಕ್ತಿಯ ಮೇಲೆ ಪೊಲೀಸರಿಗೆ ಡೌಟು ಬಂದು ವಿಚಾರಣೆ ನಡೆಸಿದಾಗ ಸತ್ಯ ಬಯಲು..!!
ಗುರುಮೂರ್ತಿ ದೂರು ನೀಡಿದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ವೇಳೆ ದಂಪತಿಯ ಮಧ್ಯೆ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಆ ಸಂದರ್ಭ ಅನುಮಾನ ಬಂದು ಪೊಲೀಸರು ಈತನನ್ನೇ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.
ಪತ್ನಿಯನ್ನು ಕೊಲೆಗೈದು ಮೃತದೇಹವನ್ನು ಬೇಯಿಸಿ ನಂತರ ಅದನ್ನು ಜಿಲ್ಲೆಲಗಂಡ ಕೆರೆಯಲ್ಲಿ ಎಸೆದಿದ್ದಾನೆ. ಈ ವಿಚಾರ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಆದರೆ ಈತ ಇಂತಹ ದುಷ್ಕೃತ್ಯ ನಡೆಸಲು ಕಾರಣ ಏನು ಎಂಬ ವಿಚಾರದ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.