ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸಂದರ್ಭದಲ್ಲಿ ಅನ್ಯಮತೀಯರು ಹಾಕಿದ್ದ ಸಂತೆಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ತೆರವು ಮಾಡಿರುವ ಘಟನೆ ಇತ್ತೀಚೆಗಷ್ಟೆ ನಡೆದಿತ್ತು.ಈ ಘಟನೆಯು ಹಿಂದೂ ಜಾತ್ರೆಗಳಲ್ಲಿ ಸಂಪೂರ್ಣ ಹಿಂದೂಮಯತೆ ತರುವ ಅಭಿಯಾನಕ್ಕೆ ಪ್ರಮುಖ ಚಾಲನೆಯನ್ನು ನೀಡಿದೆ.
ಇದರ ಮೊದಲ ಹೆಜ್ಜೆಯಾಗಿ, ಹಿಂದೂ ಸಂತೆ ವ್ಯಾಪಾರಸ್ಥರ ಅಧ್ಯಕ್ಷರಾದ ಜಯರಾಮ್ ನೆಟ್ಲ ಮತ್ತು ಟೆಂಡರ್ ಪಡೆದ ರಾಜೀವ ನಾಯಕ್ ದರ್ಬೆ ಅವರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಪ್ರಮುಖರು ಕೇಸರಿ ಶಾಲು ಹೊದಿಸಿ ಗೌರವಿಸುವುದರ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಪ್ರಮುಖರಾದ ಜಯರಾಮ್ ಬಳ್ಳಾಲ್ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಪ್ರಮುಖರು ಭಾಗವಹಿಸಿದ್ದರು. ಜೊತೆಗೆ, ಇಡೀ ಭಾರತದ ಜಾತ್ರೆಗಳಲ್ಲಿ ಸಂತೆಗಳು ಸಂಪೂರ್ಣ ಹಿಂದೂಮಯ ಆಗಬೇಕು ಎಂಬ ಮನವಿ ಮಾಡಲಾಯಿತು.