ಪೆರುವಾಯಿ ವ್ಯವಸಾಯಿ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಗೆಲುವು!

  • 25 Jan 2025 10:28:29 PM


ಪೆರುವಾಯಿ:ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ 12 ಸ್ಥಾನಗಳ ಚುನಾವಣೆಯಲ್ಲಿ ಗೀತಾನಂದ ಶೆಟ್ಟಿ ಮಾಣಿಲ ಗುತ್ತು ಅವರ ಅಧ್ಯಕ್ಷತೆಯಲ್ಲಿನ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೆಚ್ಚಿನ ಮತಗಳ ಅಂತರದಿಂದ ಈ ಜಯವು ಪಕ್ಷದ ಪ್ರಭಾವವನ್ನೂ, ಕಾರ್ಯಕರ್ತರ ಶ್ರಮವನ್ನೂ ಸ್ಪಷ್ಟವಾಗಿ ತೋರಿಸಿದೆ.

 

ಈ ಗೆಲುವಿಗೆ ಪ್ರಮುಖ ಕಾರಣರಾದ ಪೆರುವಾಯಿಯ ಹಾಗೂ ಮಾಣಿಲದ ಮುಖಂಡರು ಮತ್ತು ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.