ಚಾರ್ಮಾಡಿ ಘಾಟ್‌ನಲ್ಲಿ ಭೀಕರ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿ!

  • 26 Jan 2025 03:41:28 PM

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಉಂಟಾಗಿ, ನೂರಾರು ಎಕರೆ ಅರಣ್ಯ ಸುಟ್ಟು ಭಸ್ಮವಾಗಿ ಹೋಗಿದೆ. ಅಪರೂಪದ ಶೋಲಾ ಕಾಡು ಮತ್ತು ವನ್ಯಜೀವಿ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಬೆಟ್ಟ-ಗುಡ್ಡಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಗಾಳಿಯ ಅತಿಯಾದ ವೇಗದಿಂದ ಬೆಂಕಿ ವ್ಯಾಪಕವಾಗಿ ಹರಡಿ ಎಲ್ಲಾ ನಾಶವಾಗಿ ಹೋಗಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ.

 

ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು, ಮತ್ತು ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಎತ್ತರದ ಪ್ರದೇಶಆದ್ದರಿಂದ ಕಾರ್ಯಾಚರಣೆಯು ತುಂಬಾ ಕಠಿಣವಾಯಿತು. ಬೆಂಕಿಯ ಕೆನ್ನಾಲಿಗೆ 10 ಕಿಮೀ ವ್ಯಾಪಿಸಿದ ಕಾರಣ, ಭಾರಿ ನಷ್ಟ ಉಂಟಾಗಿದೆ. ನಷ್ಟದ ಪ್ರಮಾಣ ಹೆಚ್ಚಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಅರಣ್ಯ ಅಧಿಕಾರಿಗಳು ತಡವಾಗಿ ಸ್ಥಳಕ್ಕಾಗಮಿಸಿದರೆಂಬ ಸ್ಥಳೀಯರ ಆರೋಪ ಮಾಡಿದ್ದಾರೆಂದು ಸುದ್ದಿ ಕೇಳಿಬಂದಿದೆ.

 

ಸಿಬ್ಬಂದಿ ಮತ್ತು ಸ್ಥಳೀಯರ ಸತತ ಪ್ರಯತ್ನದಿಂದ ಇಂದು ಬೆಳಗ್ಗೆ 10 ಗಂಟೆಯ ಹಾಗೆ ಬೆಂಕಿ ಸಂಪೂರ್ಣವಾಗಿ ನಂದಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಮಲ್ಲೇಶ್, ರಂಜಿತ್, ಮುತ್ತಪ್ಪ, ಅಶೋಕ್ ಮತ್ತು ಮೋಹನ್‌ರಾಜ್ ಪಾಲ್ಗೊಂಡಿದ್ದರು.