ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮ ಉಪಕಾರ್ಯದರ್ಶಿಯಾಗಿ ಭಾರತೀಯ ಮೂಲದ ಕುಶ್ ದೇಸಾಯಿ ನೇಮಕ!

  • 26 Jan 2025 08:18:50 PM

ವಾಷಿಂಗ್ಟನ್: ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಧ್ಯಮ ಉಪಕಾರ್ಯದರ್ಶಿಯಾಗಿ ಭಾರತೀಯ ಮೂಲದ ಪತ್ರಕರ್ತ ಕುಶ್ ದೇಸಾಯಿ ಅವರನ್ನು ನೇಮಿಸಲಾಗಿದೆ. ಈ ನೇಮಕವನ್ನು ವರದಿಗಾರರ ವೃತ್ತಿ ಜೀವನದ ದೊಡ್ಡ ಸಾಧನೆಯಾಗಿದೆ.

 

ಕುಶ್ ದೇಸಾಯಿ ಈಗ ರಿಪಬ್ಲಿಕನ್ ಪಕ್ಷದ ಅಯೋವಾ ಶಾಖೆಯ ಸಂವಹನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.ಇದರ ಜೊತೆಗೆ , ವಾಷಿಂಗ್ಟನ್ ನ ಪ್ರಸಿದ್ಧ ಪತ್ರಿಕೆಯಾದ ದಿ ಡೈಲಿ ಕಾಲರ್ ನಲ್ಲಿ 10 ತಿಂಗಳ ಕಾಲ ವರದಿಗಾರನಾಗಿ ಸೇವೆ ಸಲ್ಲಿಸಿರುತ್ತಾರೆ.

 

ಗುಜರಾತಿ ಭಾಷೆಯಲ್ಲೂ ಪ್ರಾವೀಣ್ಯ ಹೊಂದಿರುವ ದೇಸಾಯಿ, ಭಾರತೀಯ ಅಮೆರಿಕನ್ ಸಮುದಾಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.