ಈ ಕೆಳಗಿನ ಮಾಹಿತಿಯನ್ನು ಗ್ರಾಮ ಪಂಚಾಯತ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ
ಜನವರಿ 30 ಗುರುವಾರ ಬೆಳಗ್ಗೆ 10.30 ಕ್ಕೆ ಈ ಕೆಳಗಿನ ಅಂಗಡಿ ಕೋಣೆ ಮತ್ತು ಭಾನುವಾರ ಸಂತೆಯ ಏಲಂ ನಡೆಯಲಿದೆ.
ಏಲಂ ನಡೆಯುವ ಸ್ಥಳ: ನೆಟ್ಟಣಿಗೆ ಮುಡ್ನೂರು ಪಂಚಾಯತ್ ಸಂಭಾಂಗಣ
ಅಂಗಡಿ ಕೋಣೆಗಳ ವಿವರ:
1.ಗಾಳಿಮುಖ ಬಸ್ ತಂಗುದಾಣದ ಒಂದು ಕೋಣೆ
2. ಪಳ್ಳತ್ತೂರು ಬಸ್ ತಂಗುದಾಣದಲ್ಲಿ (ಜಂಕ್ಷನ್‌ನಲ್ಲಿ) ಒಂದು ಕೋಣೆ
3. ಸಂಜೀವಿನಿ ಶೆಡ್‌ನಲ್ಲಿ (ಸುರುಳಿಮೂಲೆ) ಎರಡು ಕೋಣೆ
4. ಈಶ್ವರಮಂಗಲ ಪೇಟೆಯ ಸಂತೆ ಮಾರುಕಟ್ಟೆ
ವಿ.ಸೂ:
* ಅಂಗಡಿ ಕೋಣೆ ಏಲಂಗೆ ಮುಂಗಡ 5000/- ಮತ್ತು ಏಲಂ ಖಾಯಂ ಆದವರು 3 ತಿಂಗಳ ಬಾಡಿಗೆ ಅಡ್ವಾನ್ಸ್ ಮೊತ್ತ ಅದೇ ದಿನ ನೀಡಬೇಕು
* ಸಂತೆ ಏಲಂ ಗೆ ಮುಂಗಡ 10,000 ಮತ್ತು ಖಾಯಂ ಆದವರು ಮರುದಿನ ಪೂರ್ತಿ ಮೊತ್ತ ನೀಡಬೇಕು