Puttur - ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಇದರ ವತಿಯಿಂದ ಹಿಂದು ಬಿಲ್ಲವ ಸಮಾಜದ ಹೆಣ್ಣು ಮಕ್ಕಳನ್ನು ಮತ್ತು ಭಜನೆ ಸಂಕೀರ್ತನೆ ಮಾಡುವವರ ವಿರುದ್ಧ ನಾಲಿಗೆ ಹರಿ ಬಿಟ್ಟ ಕರ್ನಾಟಕ ಅರಣ್ಯ ಅಧಿಕಾರಿ ಸಂಜೀವ ಕಣಿಯೂರು ವಿರುದ್ಧ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ.
ಸಾಮಾನ್ಯ ಹಿಂದು ಕಾರ್ಯಕರ್ತರ ಮೇಲೆ ಸಣ್ಣ ವಿಷಯ ಇದ್ದಲ್ಲಿ ಇಲಾಖೆಯಿಂದ ಸುಮೋಟೋ ಕೇಸ್ ಹಾಕಲಾಗುತ್ತದೆ.
ಇತ್ತೀಚೆಗೆ ಅರುಣ್ ಉಳ್ಳಾಲ ಇವರ ಮೇಲೆ ಆಗಿರುವ ಕೇಸ್ ಇದಕ್ಕೆ ಉದಾಹರಣೆ .ಆದರೆ ದೂರು ದಾಖಲು ಮಾಡಿ 48 ಗಂಟೆಗಳು ಕಳೆದ ಮೇಲೆ ಎಫ್ .ಐ .ಆರ್ ಆಗಿರುವುದು ಚಿಂತಾಜನಕ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯವರು ಆರೋಪಿಸಿದ್ದಾರೆ
ಎಫ್ .ಐ.ಆರ್ ದಾಖಲು ಆಗಿರುವ ಸಂಜೀವ ಕಣಿಯೂರು ಅವರನ್ನು ತಕ್ಷಣ ಬಂಧಿಸಬೇಕು ಹಾಗೂ ಜವಾಬ್ದಾರಿಯುತ ಸರಕಾರಿ ಪದವಿಯಲ್ಲಿ ಇದ್ದುಕೊಂಡು ಅವರು ನೈತಿಕ ನೀತಿಯ ವಿರುದ್ಧ ಮಾತನಾಡಿದ್ದು ಅತ್ಯಂತ ಶೋಚನೀಯ . ಇಂತಹ ಸಾಮಾನ್ಯ ಪ್ರಜ್ಞೆ ಇಲ್ಲದ ಸಂಜೀವ ಕಣಿಯೂರು ಇವರನ್ನು ತಕ್ಷಣ ಸರಕಾರಿ ಉದ್ಯೋಗದಿಂದ ವಜ ಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ನಾಳೆ ಬೆಳಗ್ಗೆ 10 ಗಂಟೆಗೆ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ಕರೆಯನ್ನು ಕೊಟ್ಟಿರುವುದಾಗಿ ತಿಳಿದುಬಂದಿದೆ.