ಗೋಹತ್ಯೆ ಮಾಡಿ ಅದರ ಹೊಟ್ಟೆಯಲ್ಲಿದ್ದ ಮಾಂಸ ಕೊಂಡೊಯ್ದ ದುರುಳ ತೌಫಿಕ್ ಅಹ್ಮದ್ ಜಿದ್ದಾ ಅರೆಸ್ಟ್!;ಇವನೇ ನೋಡಿ ಆ ಪರಮಪಾಪಿ!

  • 27 Jan 2025 12:07:37 PM

ಉತ್ತರ ಕನ್ನಡ: ರಾಜ್ಯದಲ್ಲಿ ಗೋಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ‌. ಕಾನೂನಿನ ಭಯವಿಲ್ಲದ ಪಾಪಿಗಳು ತಮಗೆ ಬೇಕಾದಂತೆ ಗೋವುಗಳನ್ನು ವಧಿಸಿ ಕಸಾಯಿಖಾನೆಗೆ ಒಯ್ಯುತ್ತಿದ್ದಾರೆ. ಮೊನ್ನೆ ತಾನೇ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಇಂತಹುದೇ ದುಷ್ಕೃತ್ಯವೊಂದು ಬಯಲಾಗಿದೆ.

 

ಗರ್ಭ ಧರಿಸಿದ್ದ ಹಸುವನ್ನು ಹತ್ಯೆ ಮಾಡಿ ಮಾಂಸ ಕದ್ದೊಯ್ದ ಪಾಪಿ..!

 

ಇವರನ್ನು ಮನುಷ್ಯರನ್ನಬೇಕೋ, ಪ್ರಾಣಿಗಳನ್ನಬೇಕೋ ಗೊತ್ತಿಲ್ಲ. ಮನುಷ್ಯನಾದಲ್ಲಿ ಇಷ್ಟೊಂದು ಕ್ರೂರತನ ಇರಲು ಸಾಧ್ಯನಾ ಅನ್ನೋ ಪ್ರಶ್ನೆ ಮೂಡುತ್ತದೆ. ಗರ್ಭಧರಿಸಿದ್ದ ಗೋವನ್ನು ಹತ್ಯೆ ಮಾಡಿ ಮಾಂಸ ಕದ್ದೊಯ್ದಿದ್ದ ಪ್ರಕರಣದಲ್ಲಿ ಓರ್ವ ನೀಚನನ್ನು ಹೊನ್ನಾವರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಜ.19 ರಂದು ಗರ್ಭಧರಿಸಿದ್ದ ಗೋವನ್ನು ವಧಿಸಿ ರುಂಡ, ಕಾಲುಗಳನ್ನು ಬಿಟ್ಟು ಗೋಮಾಂಸ ಹಾಗೂ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ತೆಗೆದು ಹೊತ್ತೊಯ್ದಿದ್ದ.

 

ಬೈಕ್ ನಲ್ಲಿ ಗೋಮಾಂಸ ಹೊತ್ತೊಯ್ದ ನೀಚ..!

 

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದ ಅರಣ್ಯದಲ್ಲಿ ಗೋವನ್ನು ಹತ್ಯೆ ಮಾಡಲಾಗಿತ್ತು. ಬಂಧಿತ ಆರೋಪಿ, ಗೋವಿನ ಹತ್ಯೆಗೆ ಸಹಕಾರ ನೀಡಿದ್ದ. ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದ. ಕೃತ್ಯದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಪ್ರಕರಣದ ಹಿನ್ನೆಲೆ ಎಸ್‍ಪಿ ಎಂ.ನಾರಾಯಣ್ ಅವರು ಆರು ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.