ಹೊನ್ನಾವರ: ಹಿಂದೂ ಸಂಘಟನೆಗಳು ಗೋಮಾತೆಯ ಉಳಿವಿಗಾಗಿ ಅದೆಷ್ಟೇ ಸವಾಲುಗಳನ್ನು ಎದುರಿಸಿ ಶತ ಪ್ರಯತ್ನ ಮಾಡುತ್ತಿದ್ದರೂ ಅವುಗಳನ್ನು ಮಾಂಸಕ್ಕಾಗಿ ವಧಿಸಿ ಕಸಾಯಿಖಾನೆಗೆ ನೂಕುವ ದುರುಳರು ಮಾತ್ರ ತಮ್ಮ ಕ್ರೌರ್ಯತೆಯನ್ನು ಬಿಡುತ್ತಿಲ್ಲ. ಬಗೆದಷ್ಟೂ ಈ ಬಗ್ಗೆ ಅನೇಕ ಅಚ್ಚರಿಕರ ಸಂಗತಿಗಳು ಬಯಲಾಗುತ್ತಲೇ ಇದೆ.
ಹತ್ಯೆಗೂ ಮುನ್ನ ಹಸುವಿನ ಫೋಟೋ ತೆಗೆದು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್..!!
ಹೊನ್ನಾವರ ತಾಲ್ಲೂಕು ಸಾಲ್ಕೋಡದಲ್ಲಿ ವಿಕೃತ ಗೋಹತ್ಯೆ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಗೋಹಂತಕರು ಮಾರ್ಕೆಟ್ ಕ್ರಿಯೇಟ್ ಮಾಡುವ ಉದ್ದೇಶದಿಂದ ವಧಿಸುವ ಮುನ್ನ ಗೋವಿನ ಫೋಟೋ ತೆಗೆದು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಹಸುವನ್ನು ಕಡಿದ ಬಳಿಕವೂ ಅದರ ಮಾಂಸವನ್ನೂ ಕೂಡಾ ಗ್ರೂಪ್ ನಲ್ಲಿ ಹಂಚಿಕೊಂಡು ಡಿಮ್ಯಾಂಡ್ ಸೃಷ್ಟಿಸುತ್ತಿದ್ದರು. ಬೇಡಿಕೆ ಬಂದಾಗ ಮಾಂಸವನ್ನು ಸೂಕ್ತ ವಿಳಾಸಕ್ಕೆ ಕಳುಹಿಸಿ ಆನ್ಲೈನ್ ಮುಖೇನವೇ ಹಣ ಪಡೆಯುತ್ತಿದ್ದರು ಎಂಬ ವಿಚಾರ ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ.
ತಲೆಮರೆಸಿಕೊಂಡಿದ್ದವರಿಗೆ ಶೋಧ ಕಾರ್ಯಾಚರಣೆ, ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ..!!
ಹಸುವನ್ನು ಕೊಂದ ಪ್ರಕರಣದ ಮೊದಲ ಆರೋಪಿ ತೌಫಿಕ್ ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ಈತನ ಹೇಳಿಕೆ ಮೇರೆಗೆ ಶನಿವಾರ ಪೈಜಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿಗಳಾದ ತಲೆಮರೆಸಿಕೊಂಡಿರುವ ವಾಸಿಮ್, ಮುಜಾಮಿಲ್ ಅವರಿಗಾಗಿ ಹೆಚ್ಚುವರಿ ಪೊಲೀಸ್ ವರಿಷ್ಠ ಜಗದೀಶ್ ನೇತೃತ್ವದಲ್ಲಿ ತನಿಖೆಗಾಗಿ ಪೊಲೀಸರ ಆರು ತಂಡ ರಚನೆಯಾಗಿದ್ದು ಆರೋಪಿಗಳ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.