ಕರಿಯಂಗಳ : ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ.ನಂ.152/2ಎ2ಪಿ1 ಪ್ರದೇಶದಲ್ಲಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಪೂರ್ವಾನುಮತಿ ಪಡೆಯದೆ ಬಹುಮಹಡಿ ಕಟ್ಟಡವನ್ನು ನಿರ್ಮಿಸಿರುವುದು ನಾಗರಿಕರಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಪ್ರಾರ್ಥನಾ ಹಾಲ್ ಮತ್ತು ಕ್ಲಾಸ್ ರೂಮ್‌ಗಳಿಗೆ ಮಾತ್ರ ಅನುಮತಿ ನೀಡಿದ್ದ ಸ್ಥಳದಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿದ್ದಾರೆ.
2021ರಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸ್ಥಳೀಯ ಕೃಷ್ಣ ಆಚಾರ್ಯರು ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಆದರೂ ಸಹ ಸಂಬಂಧಿತ ಅಧಿಕಾರಿಗಳು ಇದರ ಮೇಲೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಸ್ಥಳೀಯರು ತಮ್ಮ ಮನವಿಯನ್ನು ತಹಶೀಲ್ದಾರರ ಗಮನಕ್ಕೆ ತರಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಟ್ಟಡದ ಸುತ್ತಲಿನ ಆವರಣಗೋಡೆಯು ಅಪಾಯಕಾರಿಯಾಗಿ ಎತ್ತರದಲ್ಲಿದ್ದರಿಂದ ಸ್ಥಳೀಯರ ಜೀವನಕ್ಕೆ ಹಾನಿ ಉಂಟಾಗಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಕೂಡಲೇ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರ ಬಳಿ ಸ್ಥಳೀಯರು ಮನವಿ ಮಾಡಿದ್ದಾರೆ. ಜೊತೆಗೆ ಈ ಅಕ್ರಮ ಕಟ್ಟಡವನ್ನು ತೆರವು ಗೊಳಿಸಬೇಕಾಗಿ ಈ ಮೂಲಕ ವಿನಂತಿಸಿ ಕೊಂಡಿದ್ದಾರೆ
ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ ಹಾಗೂ ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖರಾದ ಪುಷ್ಪರಾಜ್ ಕಮ್ಮಾಜೆ, ಅಕ್ಷಯ್ ರಾಜಪುತ್ ಕಲ್ಲಡ್ಕ ಮತ್ತು ಶಶಿರಾಜ್ ಪುಂಚಮೆ, ವಿಕೇಶ್, ಯೋಗೀಶ್ ಪುಂಚಮೆ, ಅಕ್ಷಿತ್ ಕೊಳತ್ತಮಜಾಲ್ , ಅಕ್ಷಯ್ ಪೊಳಲಿ ಹಾಗು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.