ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಯುವತಿಯರು, ವಿವಾಹಿತ ಮಹಿಳೆಯರು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಅಕ್ರಮ ಸಂಬಂಧಗಳು, ಮಾನಸಿಕ ಒತ್ತಡಗಳು, ಏನಾದರೊಂದು ಅವ್ಯವಹಾರಗಳು, ಮಾನವ ಕಳ್ಳ ಸಾಗಾಣಿಕೆ ಅಥವಾ ಮೋಸದ ಜಾಲಕ್ಕೆ ಸಿಲುಕಿಯೋ ಏನೋ ಮನೆಗೆ ಬಾರದೆ ಕಾಣೆಯಾಗುತ್ತಾರೆ. ಪೊಲೀಸರ ತನಿಖೆಯ ಮೂಲಕ ಕೆಲವರ ಪತ್ತೆ ಆದರೆ ಇನ್ನೂ ಕೆಲವರ ಅಡ್ರೆಸ್ಸೇ ಇರುವುದಿಲ್ಲ. ಇದೀಗ ಉಡುಪಿ ಜಿಲ್ಲೆಯ ಕಾರ್ಕಳದಲ್ಲೂ ಇಂತಹುದೇ ಘಟನೆಯೊಂದು ನಡೆದಿದೆ.
ಮಂಗ್ಳೂರಿಗೆ ಹೋಗಿ ಬರುತ್ತೇನೆಂದು ಹೋದವಳು ಮತ್ತೆ ಮನೆಗೆ ಬರಲೇ ಇಲ್ಲ...!
ಹೌದು. ಮಂಗಳೂರಿಗೆ ಹೋಗಲಿದೆ. ಹೋಗಿ ಬರುತ್ತೇನೆ ಎಂದು ಹೊರಟಿದ್ದ ಯುವತಿಯೋರ್ವಳು ಮತ್ತೆ ಮನೆಗೆ ಹಿಂತಿರುಗದೆ ನಾಪತ್ತೆಯಾದ ಘಟನೆ ನಡೆದಿದೆ. ಇಪ್ಪತ್ತೆರಡು ವರ್ಷದ ಸಂಗೀತಾ ಕಾಣೆಯಾದ ಯುವತಿಯಾಗಿದ್ದಾಳೆ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮುಂಡ್ಲುಗೋಡು ತಾಲ್ಲೂಕು ಶೀಡ್ಲಂಗೋಡಿ ಗ್ರಾಮದವರು. ಇವರು ಕಸಬಾದ ಜೋಗುಳಬೆಟ್ಟು ಎಂಬಲ್ಲಿ ವಾಸವಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದು ಅಲ್ಲಿಂದ ಮಂಗಳೂರಿಗೆ ಹೋಗಲಿದೆ ಎಂದು ಹೋದವಳು ನಂತರ ಮನೆಗೂ ಬಾರದೆ, ಅವಳ ಮನೆಗೂ ಹೋಗದೆ ಕಾಣೆಯಾಗಿದ್ದಾಳೆ.
ಯುವತಿ ಕಂಡುಬಂದರೆ ಠಾಣೆಗೆ ತಿಳಿಸುವಂತೆ ಮನವಿ..!
ಯುವತಿ ಮನೆಗೆ ಹಿಂತಿರುಗಬಹುದೆಂದು ಕಾದ ಸಂಬಂಧಿಕರು ಇಲ್ಲಿಯವರೆಗೂ ಆಕೆ ಬಾರದೆ ಇರುವುದರಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಯುವತಿ ಕಂಡುಬಂದರೆ ಅಥವಾ ಏನಾದರೊಂದು ಮಾಹಿತಿ ಸಿಕ್ಕರೆ 08258-233100, 9480805461 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.