ಉತ್ತರಪ್ರದೇಶ: ಪ್ರಯಾಗ್ ರಾಜ್ ನಲ್ಲಿ ಕಳೆದ ಅನೇಕ ದಿನದಿಂದ ಅದ್ಧೂರಿಯಾಗಿ ಮಹಾಕುಂಭಮೇಳ ನಡೆಯುತ್ತಿದೆ. ಲಕ್ಷಾಂತರ ಭಕ್ತರು ಆಗಮಿಸಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ಮಧ್ಯೆ ಇಂದು ಮೌನಿ ಅಮಾವಾಸ್ಯೆ ಇರುವ ಕಾರಣ ಎರಡನೇ ಅಮೃತ ಸ್ನಾನ ಕೈಗೊಳ್ಳಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ಮಹಾಕುಂಭಮೇಳದಲ್ಲಿ ಕಾಲ್ತುಳಿತ, ಭಕ್ತಾದಿಗಳ ಸಾವು..!
ಕಾಲ್ತುಳಿತದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಐವತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಭದ್ರತಾ ಅಧಿಕಾರಿಗಳು ಹೆಚ್ಚಿದ್ದರೂ ಭಕ್ತರ ಸಂಖ್ಯೆ ತುಂಬಿ ತುಳುಕುತ್ತಿದೆ. ಜನರ ಓಡಾಟಕ್ಕೆ ಪೂರಕವಾಗುವ ನಿಟ್ಟಿನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಕಾಲ್ತುಳಿತಕ್ಕೆ ವಿಐಪಿ ದರ್ಶನ ಕಾರಣವಾಯ್ತಾ..?
ಕುಂಭಸ್ನಾನದಲ್ಲಿ ಭಕ್ತರಿಗೆ ಹತ್ತು ಕಿಲೋ ಮೀಟರ್ ವರೆಗೆ ನಡೆದೇ ಸಾಗಬೇಕಾದ ವ್ಯವಸ್ಥೆಯಿದ್ದು ವಿಐಪಿಗಳಿಗೆ ಮಾತ್ರ ನೇರ ಸಂಗಮದವರೆಗೆ ಹೋಗಲು ವ್ಯವಸ್ಥೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಇದರಿಂದಾಗಿ ಹಲವು ಅವಘಡಗಳು ಸಂಭವಿಸಲು ಕಾರಣವಾಯ್ತು ಎಂದು ಜನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.