ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮ ವ್ಯಾಪ್ತಿಯ ಗಾಳಿಮುಖ ಎಂಬಲ್ಲಿ ನಿರ್ಮಿಸಲಾದ ಪಂಚಾಯತ್ ವತಿಯಿಂದ ಅಂಗಡಿ ಕಟ್ಟಡ ಏಲಂ ಪ್ರಕಟಣೆಯಲ್ಲಿ ದಿನಾಂಕ : 30-01-2025 ರಂದು ನಡೆಸುವುದಾಗಿ ತೀರ್ಮಾನಿಸಲಾಗಿತ್ತು.
ಆದರೆ ಸದ್ರಿ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಶೀಟುಗಳು ಮತ್ತು ಇಂಟರ್‌ಲಾಕ್ ಕಳವಾದ ಕಾರಣ ಪ್ರಕರಣ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿರುವುದರಿಂದ ಪ್ರಕರಣ ಇತ್ಯರ್ಥಗೊಂಡು ನಂತರ ಏಲಂ ಮಾಡಲಾಗುವುದು.
ಉಳಿದ ಏಲಂ ಪ್ರಕ್ರಿಯೆ ದಿನಾಂಕ: 30-01-2025 ರಂದು ನಡೆಸಲಾಗುವುದು.
ಎಂದು ಗ್ರಾಮ ಪಂಚಾಯತ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ