ಮಹಾಕುಂಭಮೇಳದಲ್ಲಿ ಕಾಲ್ತುಳಿತ...!! ದುರಂತ ಅಂತ್ಯ ಕಂಡ ಬೆಳಗಾವಿಯ ತಾಯಿ-ಮಗಳು...!!

  • 30 Jan 2025 03:08:24 PM

ಉತ್ತರ ಪ್ರದೇಶ: ಪ್ರಯಾಗ್ ರಾಜ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಕೋಟ್ಯಾನುಕೋಟಿ ಹಿಂದೂಗಳು ಆಗಮಿಸುತ್ತಿದ್ದಾರೆ. ಜನಸಾಗರದಿಂದ ತುಂಬಿ ತುಳುಕುತ್ತಿರುವ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ಅನೇಕ ಜನ ಸಾವನ್ನಪ್ಪಿರುವ ಬಗ್ಗೆಯೂ ವರದಿಯಾಗಿದೆ. ಇದೀಗ ಅಲ್ಲಿ ಬೆಳಗಾವಿಯ ಅಮ್ಮ- ಮಗಳು ಕೂಡಾ ಮೃತಪಟ್ಟಿರುವ ವಿಷಾದನೀಯ ಘಟನೆಯೊಂದು ನಡೆದಿದೆ. 

 

ಕಾಲ್ತುಳಿತಕ್ಕೆ ಸಿಕ್ಕಿ ತಾಯಿ- ಮಗಳು ದುರ್ಮರಣ..!!

 

ಬೆಳಗಾವಿಯ ಜ್ಯೋತಿ ಹತ್ತರವಾಠ ಮತ್ತು ಮಗಳು ಮೇಘಾ ಹತ್ತರವಾಠ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರಿಬ್ಬರು ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಗಾಯಗೊಂಡಿದ್ದು ಪ್ರಯಾಗ್ ರಾಜ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರು ಸಾವನ್ನಪ್ಪಿದ್ದಾರೆ. 

 

ಮೊಬೈಲ್ ರಿಂಗ್ ಆಗುತ್ತಿದ್ದರಿಂದ ಸೇಫ್ ಆಗಿದ್ದಾರೆಂದು ಆಲೋಚಿಸಿದ್ದ ಕುಟುಂಬಸ್ಥರಿಗೆ ಶಾಕ್...!!

 

ಜ್ಯೋತಿ ಅವರ ಮೊಬೈಲ್ ಯಾವಾಗ ಕರೆ ಮಾಡಿದರೂ ರಿಂಗ್ ಆಗುತ್ತಿತ್ತು. ಇದರಿಂದಾಗಿ ಅವರು ಸುರಕ್ಷಿತವಾಗಿದ್ದಾರೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆದರೆ ವಿಷಯ ತಿಳಿದ ಅವರಿಗೆ ಸಿಡಿಲು ಬಡಿದಂತಾಗಿದೆ. ಮೂರು ದಿನಗಳ ಹಿಂದೆ ಇವರಿಬ್ಬರು ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿದ್ದರು. ಆದರೆ ಇದೀಗ ಸಾವನ್ನಪ್ಪಿದ್ದು ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.