ಹಾಸನದಲ್ಲಿ ಪುಡಿ ರೌಡಿಗಳ ಪುಂಡಾಟ..!! ಬೆಂಗಳೂರು-ಮಂಗಳೂರು ಸಂಚರಿಸುತ್ತಿದ್ದ ಸುಗಮ ಬಸ್ ತಡೆದು ಮಾರಕಾಸ್ತ್ರದಿಂದ ಹಲ್ಲೆ..!!

  • 30 Jan 2025 03:38:29 PM

ಹಾಸನ : ಇತ್ತೀಚೆಗೆ ರಾಜ್ಯದಲ್ಲಿ ಪುಡಿ ರೌಡಿಗಳ ಕಾಟ ಹೆಚ್ಚಾಗಿದೆ. ಮದ್ಯ ಸೇವನೆ, ಅಮಲು ಪದಾರ್ಥ ಸೇವಿಸಿ ಕೊಲೆಗಡುಕರಂತೆ ವರ್ತಿಸುವ ರೌಡಿಗಳ ಅಟ್ಟಹಾಸ ತಾರಕಕ್ಕೇರಿದೆ. ಇದೀಗ ಹಾಸನದಲ್ಲಿ ಕೂಡಾ ರೌಡಿಗಳು ಅಟ್ಟಹಾಸ ಮೆರೆದಿದ್ದು ಖಾಸಗಿ ಬಸ್ ನ ಮೇಲೆ ಹಲ್ಲೆ ಮಾಡಿದ್ದಾರೆ. 

 

ಖಾಸಗಿ ಬಸ್ ತಡೆದು ಅಟ್ಟಹಾಸ ಮೆರೆದ ಪುಡಿ ರೌಡಿಗಳು..!!

 

ಖಾಸಗಿ ಬಸ್ಸೊಂದನ್ನು ತಡೆದು ಪುಡಿ ರೌಡಿಯೊಬ್ಬ ಅಟ್ಟಹಾಸ ಮೆರೆದು ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ಹಾಸನ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ. ಈತ ನಶೆಯಲ್ಲಿದ್ದಂತೆ ಕಂಡುಬಂದಿದೆ. ಬುಧವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಸಂಚರಿಸುತ್ತಿತ್ತು

 

. ಈ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿ ನಿಲ್ಲಿಸಿದ್ದಾನೆ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಮುಂಭಾಗದ ಗ್ಲಾಸನ್ನು ಚೂರು ಚೂರು ಮಾಡಿದ್ದಾನೆ. 

 

ಪುಡಿ ರೌಡಿಯ ಹುಚ್ಚಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್...!!

 

ಪುಡಿ ರೌಡಿಯ ಹುಚ್ಚಾಟವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಸ್ಸು ಸಂಚರಿಸುತ್ತಿರುವಾಗಲೇ ಹೀಗೆ ಮಾಡಿದರೆ ಇನ್ನು ಕಾರು, ಬೈಕಿನಂತ ವಾಹನದಲ್ಲಿ ‌ಪ್ರಯಾಣ ಮಾಡುವವರ ಗತಿ ಏನು..?

 

ಇವರ ಅಟ್ಟಹಾಸಕ್ಕೆ ಕಡಿವಾಣ ಹಾಕಲೇಬೇಕು ಎಂದು ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿ ಪೊಲೀಸರಿಗೆ ಮನವಿ ಮಾಡಿದ್ದಾರೆ.