ಬೆಂಗಳೂರು: ಹಣದ ವ್ಯಾಮೋಹಕ್ಕೆ ಬಲಿಯಾಗಿ ಜನ ಲಾಭಗಳಿಸುವ ಉದ್ದೇಶದಿಂದ ಇವತ್ತು ಎಂತಹ ಮಾರ್ಗವನ್ನಾದರೂ ಹಿಡಿಯಲು ಸಿದ್ಧರಿದ್ದಾರೆ. ಶೀಲವನ್ನೂ ಹರಾಜಿಗಿಟ್ಟು ಹಣ ಮಾಡುವ ತುಚ್ಛ ಮನಸ್ಸಿನ ಜನರೂ ಸಮಾಜದಲ್ಲಿದ್ದಾರೆ. ಇತ್ತೀಚೆಗೆ ಅಲ್ಲಲ್ಲಿ ಮಾಂಸದಂಧೆ ಪ್ರಕರಣಗಳ ಬಗ್ಗೆ ದೂರುಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಅಂತಹುದೇ ಒಂದು ವಿಚಿತ್ರ ಪ್ರಕರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚಂದದ ಹುಡುಗಿಯರೇ ಹುಷಾರ್...!! ಇವರಿಗೆ ನೀವೇ ಟಾರ್ಗೆಟ್...!!
ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಚಂದದ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಆಂಟಿಯರನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊರ ರಾಜ್ಯದಿಂದ ಕೆಲಸಕ್ಕೆ ಬರುವ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಗಾಳ ಹಾಕಿ ಅವರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದರು ಎಂಬ ಮಹತ್ವದ ಅಂಶ ತನಿಖೆಯಲ್ಲಿ ಬಯಲಾಗಿದೆ.
ಇಬ್ಬರು ಕಿಂಗ್ ಪಿನ್ ಮಹಿಳೆಯರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಕಂಬಿ ಹಿಂದೆ ಬಿದ್ದಿರುವ ಅವರು ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಜಾಲ ಇನ್ನೂ ಎಷ್ಟು ವಿಸ್ತಾರವಾಗಿದೆ ಎಂದು ತಿಳಿಯಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೆಲ ಯುವತಿರನ್ನೂ ರಕ್ಷಣೆ ಮಾಡಿದ್ದಾರೆ.
ಈ ಖತರ್ನಾಕ್ ಮಹಿಳೆಯರು ದಂಧೆ ನಡೆಸುತ್ತಿದ್ದದ್ದು ಹೇಗೆ ಗೊತ್ತಾ..?
ಬ್ಯಾಡರಹಳ್ಳಿ ಬಳಿಯ ಬಿಇಎಲ್ ಬಡಾವಣೆಯಲ್ಲಿ ಮನೆ ಬಾಡಿಗೆ ಪಡೆದಿದ್ದ ಇವರು ಅಲ್ಲೇ ದಂಧೆ ನಡೆಸುತ್ತಿದ್ದರು. ಮನೆ ಬಾಡಿಗೆಯನ್ನೂ ಓನರ್ ಗೆ ಟೈಂ ಟು ಟೈಂ ಕೊಡುತ್ತಿದ್ದರು. ಗಿರಾಕಿಗಳನ್ನು ಫೋನ್ ಮೂಲಕ ಸಂಪರ್ಕಿಸಿ, ಫೋಟೋ ಕಳುಹಿಸಿ ಒಂದು ಹುಡುಗಿಗೆ ಹತ್ತರಿಂದ ಹನ್ನೆರಡು ಸಾವಿರ ರೇಟ್ ಫಿಕ್ಸ್ ಮಾಡುತ್ತಿದ್ದರು. ಗಿರಾಕಿಗಳು ಒಪ್ಪಿದ ಜಾಗಕ್ಕೆ ಹುಡುಗಿಯರನ್ನು ಕಳುಹಿಸುತ್ತಿದ್ದರು. ಒಬ್ಬ ಯುವತಿಯನ್ನು ಪೊಲೀಸರು ಬಚಾವು ಮಾಡಿದ್ದಾರೆ. ತನಿಖೆ ಮುಂದುವರೆದಿದೆ.