ಮಂಗಳೂರು|ದ.ಕ ಡಿಸಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು...!! ನೋಟಿಸ್ ಜಾರಿ ಮಾಡಿದ ಸಿವಿಲ್ ಕೋರ್ಟ್..!

  • 31 Jan 2025 02:04:39 PM

ಮಂಗಳೂರು: ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಉಲ್ಲಂಘನೆ ಯಾರೇ ಮಾಡಿದ್ರೂ ಅದಕ್ಕೆ ತಕ್ಕ ಶಿಕ್ಷೆ ಆಗಲೇಬೇಕು. ಭಾರತದ ಸಂವಿಧಾನವೂ ಕೂಡಾ ಅದನ್ನೇ ಹೇಳುತ್ತದೆ. ಇದೀಗ ದ.ಕ ಜಿಲ್ಲಾಧಿಕಾರಿ ತಪ್ಪು ಮಾಡಿ ಫಜೀತಿಗೆ ಸಿಲುಕಿದ್ದಾರೆ. ಇವರಿಗೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ.

 

ದ.ಕ ಡಿಸಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು..!!

 

ದ.ಕ ಜಿಲ್ಲಾಧಿಕಾರಿ ವಿರುದ್ಧ ಬಂಟ್ವಾಳ ಸಿವಿಲ್ ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿಕೊಂಡು ಇದೀಗ ಡಿಸಿಗೆ ನೋಟೀಸ್ ಜಾರಿ ಮಾಡಿದೆ. ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ವಿಚಾರಣೆ ಕೈಗೆತ್ತಿಕೊಂಡು ಡಿಸಿಗೆ ನೋಟೀಸ್ ಜಾರಿ ಮಾಡಲಾಗಿದೆ. 

 

ನಡೆದ ಘಟನೆ ಏನು..?

 

ವಿಟ್ಲದ ಅಪ್ಪರಿಪಾದೆಯಲ್ಲಿ ಹೊನ್ನಮ್ಮ ಎಂಬವರು 1994ರಲ್ಲಿ ಸರ್ಕಾರದ ವಿರುದ್ಧ ವ್ಯಾಜ್ಯ ದಾಖಲಿಸಿ ಕಸಬಾ ಗ್ರಾಮದಲ್ಲಿ 4.12 ಎಕರೆ ಜಮೀನನ್ನು ಬಲವಂತದಿಂದ ಒಕ್ಕಲೆಬ್ಬಿಸದಂತೆಯೂ ಈ ಜಮೀನಿನ ಬಗ್ಗೆ ಯಾವುದೇ ದಾಖಲೆಗಳನ್ನು ಮಾಡದಂತೆ ಶಾಶ್ವತ ಪ್ರತಿಬಂಧಕಾಜ್ಞೆ ಆದೇಶವನ್ನು ಪಡೆದುಕೊಂಡಿದ್ದರು.

 

ಈ ಆದೇಶವನ್ನು ಉಲ್ಲಂಘಿಸಿ 2024 ಅಗಸ್ಟ್ 16ರಂದು 1.88 ಎಕರೆ ಜಮೀನನ್ನು ಸರ್ಕಾರದ ಅಧಿಸೂಚನೆಯಂತೆ ಎಫ್.ಎಸ್.ಟಿ.ಪಿ ಪ್ಲಾಂಟ್ ನಿರ್ಮಿಸಲು ಕಾಯ್ದಿರಿಸಿ ವಿಟ್ಲ ಪಟ್ಟಣ ಪಂಚಾಯಿತಿಗೆ ಹಸ್ತಾಂತರವಾಗಿತ್ತು. ಈ ರೀತಿ ದಾಖಲೆ ಮಾಡಿರುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಎಂದು ಮೃತ ಹೊನ್ನಮ್ಮ ಅವರ ವಾರಸುದಾರ ಜಿಲ್ಲಾ ಡಿಸಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.