ಪುತ್ತೂರು: ರಾಜಕೀಯ ಎಂದ ಮೇಲೆ ಪರಸ್ಪರ ಪಕ್ಷಗಳ ಮಧ್ಯೆ ಕಿತ್ತಾಟ, ವ್ಯಂಗ್ಯ ಹೇಳಿಕೆ, ಓಲೈಕೆ ಇದ್ದೇ ಇರುತ್ತದೆ. ಆದರೆ ಈಗೀಗ ರಾಜಕಾರಣ ಧರ್ಮದ ಓಲೈಕೆಯಲ್ಲಿ ಸಾಗುತ್ತಿದೆ. ಯಾರನ್ನೋ ಮನವೊಲಿಸುವ ದೃಷ್ಟಿಯಿಂದ ಇನ್ನಾವುದೋ ಧರ್ಮವನ್ನು, ಧರ್ಮದ ವೈದಿಕ ಆಚರಣೆಗಳನ್ನು ಟೀಕೆ ಮಾಡೋದು, ಅವಮಾನಿಸುವುದು ನಡೆಯುತ್ತಿದೆ.
ಇದೀಗ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯೇನು..?
ಮಹಾಕುಂಭಮೇಳವನ್ನು ಟೀಕಿಸುವ ಉದ್ದೇಶದಿಂದ ಹಿಂದೂ ವಿರೋಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಂಗಾ ನದಿಯ ಸ್ನಾನದಿಂದ ಬಡತನವನ್ನು ಕೊನೆಗೊಳಿಸಲು ಸಾಧ್ಯವೇ? ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಇವರ ಈ ಹೇಳಿಕೆ ಹಿಂದೂಗಳನ್ನು ಆಕ್ರೋಶಭರಿತರನ್ನಾಗಿ ಮಾಡಿದೆ. ಇವರ ವ್ಯಂಗ್ಯಕ್ಕೆ ಅನೇಕ ಬಿಜೆಪಿ ನಾಯಕರು, ಹಿಂದೂ ಮುಖಂಡರು ಕೌಂಟರ್ ನೀಡಿದ್ದಾರೆ.
ಮುಸ್ಲಿಮರನ್ನು ತಾವೇ ಹಣ ಕೊಟ್ಟು ಮೆಕ್ಕಾಗೆ ಕಳುಹಿಸುತ್ತೀರಿ, ಆಗ ಬಡತನ ನಿರ್ಮೂಲನೆ ಆಗುತ್ತದೆಯೇ..? ಹಿಂದೂಗಳನ್ನು ಅವಹೇಳನ ಮಾಡಿ ಪ್ರಶ್ನಿಸುವ ನಿಮಗೆ ಬೇರೆ ಧರ್ಮದವರನ್ನು ಟೀಕಿಸುವ ಧಂ ಇದೆಯೇ ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಇವರ ಈ ಹೇಳಿಕೆ ದೇಶದಲ್ಲಿ ವಿವಾದವನ್ನು ಸೃಷ್ಟಿಸಿದ್ದು ಇದಕ್ಕೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲೇಬೇಕೆಂದು ಪಟ್ಟುಹಿಡಿದಿದ್ದಾರೆ.
ಖರ್ಗೆ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿಗೆ ಮನವಿ...!!
ಕುಂಭಮೇಳದ ಬಗ್ಗೆ ಟೀಕಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪುತ್ತೂರಿನಲ್ಲಿ ಸಹಾಯಕ ಕಮಿಷನರ್ ಮೂಲಕ ರಾಷ್ಟ್ರಪತಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ, ವೇಣುಗೋಪಾಲ ಮಣಿಯಾಣಿ, ಸಚಿನ್ ವಳತ್ತಡ್ಕ ಮತ್ತಿತ್ತರರು ಉಪಸ್ಥಿತರಿದ್ದರು.