ಕುಂಭಮೇಳದಲ್ಲಿ ಎಲ್ಲರ ಮನಸೆಳೆದ ಸೌಂದರ್ಯ ಬೆಡಗಿ ಮೊನಾಲಿಸಾಗೆ ಫಿಲ್ಮ್ ಆಫರ್...!! ತನ್ನ ಚಿತ್ರಕ್ಕೆ ಸೆಲೆಕ್ಟ್ ಮಾಡಿಕೊಂಡ ಖ್ಯಾತ ನಿರ್ದೇಶಕ...!!!

  • 01 Feb 2025 03:46:26 PM

ಪ್ರಯಾಗ್ ರಾಜ್: ಮಹಾಕುಂಭ ಮೇಳದಲ್ಲಿ ಮಣಿ ಸರ ಮಾರುವ, ಸೌಂದರ್ಯದ ಕಣ್ಣಿನಿಂದಲೇ ಎಲ್ಲರನ್ನೂ ಮೋಡಿ ಮಾಡಿದ ಮೊನಾಲಿಸಾಳದ್ದೇ ಸದ್ದು. ಮಾಧ್ಯಮಗಳಲ್ಲಿ ನೋಡಿದ್ರೂ ಈಕೆಯದ್ದೇ ಸುದ್ದಿ. ಮಣಿಸರ ಮಾರುವ ಈಕೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಇದೀಗ ಈಕೆಗೆ ಚಲನಚಿತ್ರದಲ್ಲಿ ನಟಿಸುವ ಅವಕಾಶವೊಂದು ಒದಗಿಬಂದಿದೆ.

 

ಮೊನಾಲಿಸಾ ಮನೆಗೆ ಭೇಟಿ ನೀಡಿದ ಖ್ಯಾತ ನಿರ್ದೇಶಕ...!!

 

ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಮೊನಾಲಿಸಾ ಅಲಿಯಾಸ್ ಮೋನಿ ಭೋನ್ಸಾಲೆ ಅವರ ಮನೆಗೆ ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಖ್ಯಾತಿಯ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಮತ್ತು ಅವರ ತಂಡ ತೆರಳಿ ಭೇಟಿ ಮಾಡಿದ್ದಾರೆ. ಅಲ್ಲದೆ ತನ್ನ ಮುಂಬರುವ `ದಿ ಡೈರಿ ಆಫ್ ಮಣಿಪುರ' ಚಿತ್ರಕ್ಕಾಗಿ ಮೊನಾಲಿಸಾ ಅವರನ್ನೇ ಸೆಲೆಕ್ಟ್ ಮಾಡಿದ್ದಾರೆ. 

 

ಈ ಬಗ್ಗೆ ಮೊನಾಲಿಸಾ ಸಂಭ್ರಮ ವ್ಯಕ್ತಪಡಿಸಿದ್ದು ಹೇಗೆ...??

 

ದಿ ಡೈರಿ ಆಫ್ ಮಣಿಪುರ ಚಿತ್ರದ ಮುಖೇನ ಮೊನಾಲಿಸಾ ಬೆಳ್ಳಿತೆರೆಗೆ ಎಂಟ್ರಿ ನೀಡುವುದರ ಬಗ್ಗೆ ಆಕೆಯ ಕುಟುಂಬ ಒಪ್ಪಿಗೆಯನ್ನು ನೀಡಿದೆ. ಈ ಬಗ್ಗೆ ಮಾತನಾಡಿದ ಮೊನಾಲಿಸಾ ಅವರು ಮೊದಲು ನನಗೆ ಕರೆ ಮಾಡಿ ಅವರ ಮುಂಬರುವ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುವುದಾಗಿ ಹೇಳಿದರು.

 

ನಂತರ ನಮ್ಮ ಮನೆಗೆ ಬಂದು ಭೇಟಿಯಾಗಿ ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಮನವೊಲಿಸಿದರು. ಈಗ ನನಗೆ ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ನನ್ನ ಕುಟುಂಬವೂ ಒಪ್ಪಿಕೊಂಡಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾಳೆ.