ಹೊಸ ಆದಾಯ ತೆರಿಗೆ ಸ್ಲ್ಯಾಬ್: ನಿಮ್ಮ ಆದಾಯದ ಮೇಲೆ ಎಷ್ಟು ತೆರಿಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

  • 02 Feb 2025 06:04:05 PM

2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಸ್ಲ್ಯಾಬ್ ನ್ನು ಘೋಷಿಸಿದ್ದಾರೆ. ಈ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಮಧ್ಯಮ ವರ್ಗದ ತೆರಿಗೆದಾರರಿಗೆ ಅನುಕೂಲವಾಗುವಂತೆ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದಾರೆ. ಈ ಹೊಸ ಸ್ಲ್ಯಾಬ್‌ಗಳ ಪ್ರಕಾರ, ವಾರ್ಷಿಕ ಆದಾಯ ₹12 ಲಕ್ಷದವರೆಗೆ ಹೊಂದಿರುವ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ.

 

ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳು ಹೀಗಿವೆ: 

 

₹0 - ₹4 ಲಕ್ಷ: ತೆರಿಗೆ ವಿನಾಯಿತಿ

₹4 ಲಕ್ಷ - ₹8 ಲಕ್ಷ: 5% ತೆರಿಗೆ

₹8 ಲಕ್ಷ - ₹12 ಲಕ್ಷ: 10% ತೆರಿಗೆ

₹12 ಲಕ್ಷ - ₹16 ಲಕ್ಷ: 15% ತೆರಿಗೆ

₹16 ಲಕ್ಷ - ₹20 ಲಕ್ಷ: 20% ತೆರಿಗೆ

₹20 ಲಕ್ಷ - ₹24 ಲಕ್ಷ: 25% ತೆರಿಗೆ

₹24 ಲಕ್ಷ ಮೇಲ್ಪಟ್ಟ ಆದಾಯ: 30% ತೆರಿಗೆ

 

ಈ ಹೊಸ ತೆರಿಗೆ ಸ್ಲ್ಯಾಬ್‌ಗಳು ಏಪ್ರಿಲ್ 1, 2025ರಿಂದ ಜಾರಿಗೆ ಬರಲಿದ್ದು, ಮಧ್ಯಮ ವರ್ಗದ ತೆರಿಗೆದಾರರಿಗೆ ತೆರಿಗೆ ಹೊರೆಯನ್ನು ಕಡಿಮೆಯಾಗುತ್ತದೆ.

 

ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಆದಾಯ ತೆರಿಗೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಪ್ರಕಾರ 70ಕ್ಕೂ ಹೆಚ್ಚು ವಿನಾಯಿತಿಗಳನ್ನು ಪಡೆಯಬಹುದು ಆದರೆ ಹೊಸ ತೆರಿಗೆ ಪದ್ಧತಿಗೆ ಹೋಲಿಸಿದರೆ ಇದರಲ್ಲಿ ತೆರಿಗೆ ದರ ಹೆಚ್ಚು.

 

ಇದೇ ವೇಳೆ, ಬಾಡಿಗೆ ಮೇಲಿನ(TDS) ಮಿತಿಯನ್ನು ವಾರ್ಷಿಕ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲಕಾರವಾಗಲಿದೆ.

 

ಈ ಬದಲಾವಣೆಗಳು ಮಧ್ಯಮ ವರ್ಗದ ತೆರಿಗೆದಾರರಿಗೆ ಹೆಚ್ಚಿನ ಹಣ ಕೈಯಲ್ಲಿ ಉಳಿಯಲು ಸಹಾಯ ಮಾಡುವುದರ ಜೊತೆಗೆ ದೇಶದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ.