ಪ್ರತಿನಿತ್ಯ ಈಶ್ವರಮಂಗಲ ಮಾರ್ಗವಾಗಿ ತೆರೆದ ವಾಹನದಲ್ಲಿ ಅಸಮರ್ಪಕವಾಗಿ ಕೋಳಿ ತ್ಯಾಜ್ಯವನ್ನು ತೆರೆದ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿರುವವರನ್ನು ಸಾರ್ವಜನಿಕರು ತಡೆದು ನಿಲ್ಲಿಸಿದ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ
ಪಂಚೋಡಿ ಎಂಬಲ್ಲಿರುವ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯದೆ ರಾಜಾರೋಶವಾಗಿ ನಡೆಯುತ್ತಿರುವ ಕೋಳಿತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೋಳಿತ್ಯಾಜ್ಯ ತೆಗೆದುಕೊಂಡು ಹೋಗುವವರು ರಸ್ತೆಯಲ್ಲಿ ಪ್ರತಿನಿತ್ಯ ಚೆಲ್ಲಿಕೊಂಡು ಹೋಗುತ್ತಿರುವುದನ್ನು ಕಂಡು ಸಾರ್ವಜನಿಕರು ತಡೆದು ನಿಲ್ಲಿಸಿ ಈಶ್ವರಮಂಗಲ ಪೋಲೀಸರಿಗೆ ಮಾಹಿತಿ ನೀಡಿದರು
ಕೂಡಲೇ ಸ್ಥಳಕ್ಕಾಗಮಿಸಿದ ಪೋಲೀಸರು ವಾಹನವನ್ನು ವಶಪಡಿಸಿ ಈಶ್ವರಮಂಗಲ ಹೊರಠಾಣೆಯಲ್ಲಿರಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ
ಪಂಚೋಡಿ ಎಂಬಲ್ಲಿರುವ ಕೋಳಿತ್ಯಾಜ್ಯ ಘಟಕದ ದುರ್ವಾಸನೆ ಯ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಇದು ಕೂಡ ವಿಚಾರಣೆಯ ಹಂತದಲ್ಲಿರುತ್ತದೆ
ಎರಡು ತಿಂಗಳ ಹಿಂದೆ ಮಾನ್ಯ ಸಹಾಯಕ ಆಯುಕ್ತರು ಕೂಡ ಕೋಳಿ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಳಕ್ಕೆ ಆಗಮಿಸಿದ್ದರು ಹಾಗೂ ಅವರಿಗೆ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ದೊರೆತಿರುತ್ತದೆ
ಈ ರೀತಿ ಅಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವವರಿಗೆ ಸೂಕ್ತ ದಂಡ ವಿಧಿಸುವಂತೆ ಸಾರ್ವಜನಿಕರು ಪೋಲೀಸರಿಗೆ ಮನವಿ ಮಾಡಿದರು ಹಾಗೂ ಸಂಭಂದ ಪಟ್ಟ ಗ್ರಾಮಪಂಚಾತ್ ಗೆ ತಿಳಿಸಿದರು
ವಶ ಪಡಿಸಿಕೊಂಡ ವಾಹನಕ್ಕೆ ಇನ್ನು ಯಾವ ರೀತಿ ದಂಡ ವಿಧಿಸುತ್ತಾರೆ ಎಂದು ಕಾದು ನೋಡ ಬೇಕಿದೆ
ಕೂಡಲೇ ಸ್ಥಳಕ್ಕೆ ಆಗಮಿಸಿ ವಾಹನ ವಶಕ್ಕೆ ಪಡೆದ ಈಶ್ವರಮಂಗಲ ಹೊರ ಠಾಣಾ ಸಿಬ್ಬಂದಿಯವರ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ