ಮೆಡಿಕಲ್ ಶಾಪ್ ಗೆ ಬರೋ ಹೆಣ್ಮಕ್ಕಳೇ ಈತನೇ ಟಾರ್ಗೆಟ್..!! ತೆವಲು ತೀರಿಸಿಕೊಳ್ಳುವ ವೀಡಿಯೋ ಮಾಡಿ ಖುಷಿ ಪಡುತ್ತಿದ್ದ ವಿಕೃತಕಾಮಿ ಅಮ್ಜದ್..!

  • 03 Feb 2025 01:04:02 PM

ಚನ್ನಪಟ್ಟಣ: ಸಾಮಾಜಿಕ ಜಾಲತಾಣಗಳ ಪ್ರಭಾವವೋ, ಆಧುನಿಕತೆಯ ಪರಿಣಾಮವೋ ಗೊತ್ತಿಲ್ಲ ಇತ್ತೀಚೆಗೆ ಮಧ್ಯವಯಸ್ಕರಲ್ಲಿ ಕಾಮೋದ್ರೇಕ ಅನ್ನೋದು ಯುವಜನತೆಗಿಂತಲೂ ಹೆಚ್ಚಾಗಿದೆ. ಕೆಲವು ಕಾಮುಕರು ಬಸ್ಸಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಎಲ್ಲೆಂದರಲ್ಲಿ ತಮ್ಮ ತೃಷೆಯನ್ನು ತೀರಿಸಿಕೊಂಡು ಮಹಿಳೆಯರಲ್ಲಿ ಕೇವಲವಾಗಿ ವರ್ತಿಸುತ್ತಾರೆ. ಇದೀಗ ಅಂತಹುದೇ ತೆವಲುರಾಜನ ಅಸಹ್ಯ ವರ್ತನೆಯೊಂದು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. 

 

ಬಾಲಕಿಯರನ್ನೂ ಬಿಡದೆ ಕಾಮತೀಟೆ ತೀರಿಸಿಕೊಳ್ಳುತ್ತಿದ್ದ ಅಮ್ಜದ್...!!

 

ಮೆಡಿಕಲ್ ಶಾಪ್ ಗೆ ಬಂದ ಮಹಿಳೆಯರನ್ನು ಮತ್ತು ಬಾಲಕಿಯನ್ನು ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಕಾಮುಕನ ನೀಚ ಕೃತ್ಯವೊಂದು ದಾವಣಗೆರೆಯ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಚೆನ್ನಗಿರಿ ಅಮರ್ ಮೆಡಿಕಲ್ ಶಾಪ್ ನ ಮಾಲೀಕ ಅಮ್ಜದ್ ಈ ನೀಚ ಕೃತ್ಯ ಎಸಗಿದ ಕಾಮುಕ.

 

ಈತನ ಕರ್ಮದಿಂದ ಮಹಿಳೆಯರೂ ಅವಮಾನಪಡುವಂತಾಗಿದೆ. ಈತನ ಕ್ಲಿನಿಕ್ ಗೆ ಬರುವ ಮಹಿಳೆಯರು ಮತ್ತು ಬಾಲಕಿಯರೇ ಈತನ ಪ್ರಮುಖ ಟಾರ್ಗೆಟ್ ಆಗಿದ್ದು ಅವರಿಗೆ ಔಷಧಿ ನೀಡುವ ನೆಪದಲ್ಲಿ ಲೈಂಗಿಕ ಹಿಂಸೆ ನೀಡುತ್ತಿದ್ದ. ಶಾಲಾ ಬಾಲಕಿಯನ್ನು ಪುಸಲಾಯಿಸಿ ಆ ಬಾಲಕಿ ಅತ್ತು ಕರೆದು ಗೋಗರೆದರೂ ಕೂಡಾ ಬಿಡದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕೀಚಕನ ಮೊಬೈಲ್ ನಲ್ಲಿ ಅರ್ವತ್ತಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳು ಕೂಡಾ ಪತ್ತೆಯಾಗಿದೆ.

 

ತಾನೇ ಮಾಡಿಕೊಂಡ ವೀಡಿಯೋವನ್ನು ಲ್ಯಾಪ್‌ಟಾಪ್ ಗೆ ಹಾಕಿ ವಿಕೃತ ಖುಷಿ ಪಡ್ತಿದ್ದ..!!

 

ಮಹಿಳೆಯರಿಗೆ ಗೊತ್ತಿಲ್ಲದೆ ಈತ ವೀಡಿಯೋ ಮಾಡಿಕೊಳ್ಳುತ್ತಿದ್ದ. ನಂತರ ಅದನ್ನು ಲ್ಯಾಪ್‌ಟಾಪ್ ಗೆ ಹಾಕಿ ವಿಕೃತ ಆನಂದ ಪಡುತ್ತಿದ್ದ. ಬಾಲಕಿಯನ್ನು ಅತ್ಯಾಚಾರ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರೇ ಆತನ ಕಾಮದಾಹವನ್ನು ಕಠಿಣ ಕ್ರಮದ ಮೂಲಕ ನಿಯಂತ್ರಿಸಬೇಕಿದೆ.