ಸಿದ್ದು ಸರ್ಕಾರದ ವಿರುದ್ಧವೇ ರೊಚ್ಚಿಗೆದ್ದ ಸಿಎಂ ರಾಜಕೀಯ ಸಲಹೆಗಾರ...!! ರಾಜೀನಾಮೆ ನೀಡಿದ ಬಿ.ಆರ್ ಪಾಟೀಲ್ ..!

  • 03 Feb 2025 01:07:49 PM


ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕೆ ಮಾಡೋದು, ವ್ಯಂಗ್ಯ ಹೇಳಿಕೆ ನೀಡೋದು ಕಾಮನ್.‌ ಆದರೆ ಕಾಂಗ್ರೆಸ್ಸಿಗರೇ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ ಹೇಗೆ ಹೇಳಿ..ಸಿದ್ಧರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿಗಾಗಿ ಫೈಟ್ ಜೋರಾಗಿದೆ.

 

ಕೆಪಿಸಿಸಿ ಅಧ್ಯಕ್ಷರಿಗಾಗಿ ಲಾಬಿಯೂ ಜೋರಾಗಿದೆ. ಇತ್ತೀಚೆಗೆ ಸಚಿವ ಜಾರಕಿಹೊಳೆ ನಿವಾಸದಲ್ಲಿ ಸಿಎಂ ಸಮ್ಮುಖದಲ್ಲಿ ಕೆಲವು ಆಪ್ತ ಸಚಿವರು ಔತಣಕೂಟದ ಹೆಸರಿನಲ್ಲಿ ಕೂತು ಮಾತುಕಥೆ ನಡೆಸಿದ್ದರು. ಇದು ಈಗ ವಿಭಿನ್ನ ರೀತಿಯ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಸಿಎಂ ರಾಜಕೀಯ ಸಲಹೆಗಾರ ರಾಜೀನಾಮೆ ನೀಡಿ ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

 

ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದ ಬಿ.ಆರ್ ಪಾಟೀಲ...!

 

ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಮುಖಂಡರ ನಡುವೆಯೇ ಅನೇಕ ರೀತಿಯಲ್ಲಿ ತಾರತಮ್ಯವಾಗುತ್ತಿದೆ. ಇದು ಇಂದು ನಿನ್ನೆಯಿಂದಲ್ಲ. ಕಳೆದ ಅನೇಕ ದಿನಗಳಿಂದ ಇಂತಹ ಬದಲಾವಣೆಯನ್ನು ನಾವು ಗಮನಿಸುತ್ತಿದ್ದೇವೆ ಎಂದು ಕಲಬುರಗಿಯ ಆಳಂದ ಶಾಸಕನಾಗಿರುವ ಬಿ.ಆರ್ ಪಾಟೀಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅವರು ಮುಖ್ಯಮಂತ್ರಿಗಳ ಸಲಹೆಗಾರ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಬಿಗ್ ಶಾಕ್ ನೀಡಿದ್ದಾರೆ. 

 

ಮುಖ್ಯಮಂತ್ರಿ ಸಿದ್ದುಗೆ ಪತ್ರ ರವಾನಿಸಿದ ಪಾಟೀಲ್..!

 

ಸಿಎಂ ಸಲಹೆಗಾರ ಸ್ಥಾನಕ್ಕೆ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ ನೀಡಿ ನೇರವಾಗಿ ಸಿಎಂ ಸಿದ್ಧರಾಮಯ್ಯ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇವರು ಒಂದು ವರ್ಷದಿಂದ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಿದ್ಧರಾಮಯ್ಯ ಅವರ ಆಪ್ತ ಗೆಳೆಯರಲ್ಲಿ ಒಬ್ಬರಾದ ಇವರ ದಿಢೀರ್ ನಿರ್ಧಾರ ಕಾಂಗ್ರೆಸ್ ನಲ್ಲಿ ಸಂಚಲನವನ್ನು ಮೂಡಿಸಿದೆ.

 

ಸ್ವಪಕ್ಷದ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸುವ ಮೂಲಕ ಇವರು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದಾರೆ.