ಯುಎಸ್ಎ: ಐಸಿಎಸ್ ಉಗ್ರರ ದುಷ್ಕೃತ್ಯಗಳು ಆಗಾಗ ಬಯಲಾಗುತ್ತಲೇ ಇರುತ್ತದೆ. ವಿಶ್ವಕ್ಕೆ ಮಾರಕವಾಗಿರುವ ಇವರನ್ನು ಹುಟ್ಟಡಗಿಸಲು ನಾನಾ ರೀತಿಯ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತದೆ. ಇದೀಗ ಇವರನ್ನು ಮಟ್ಟ ಹಾಕಲು ಅಮೇರಿಕಾದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಖಡಕ್ ಆದೇಶವನ್ನು ಹೊರಡಿಸಿದ್ದಾರೆ.
ಉಗ್ರರ ವಿರುದ್ಧ ರೊಚ್ಚಿಗೆದ್ದ ಟ್ರಂಪ್..!!
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಸಿಎಸ್ ಉಗ್ರರ ವಿರುದ್ಧ ರೊಚ್ಚಿಗೆದ್ದು ದಾಳಿ ನಡೆಸಲು ಆದೇಶ ಹೊರಡಿಸಿದ್ದಾರೆ. ಸೊಮಾಲಿಯಾ ನೆಲದಲ್ಲಿ ಇರುವ ಉಗ್ರರನ್ನು ಮಟ್ಟ ಹಾಕಲು ಈಗಾಗಲೇ ಮಾಸ್ಟರ್ ಪ್ಲ್ಯಾನ್ ನಡೀತ್ತಿದೆ. ಈ ಬಗ್ಗೆ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ನಾವು ನಿಮ್ಮನ್ನು ಹುಡುಕಿ ಕೊಲ್ಲುತ್ತೇವೆ ಎಂದು ಗುಡುಗಿದ ಟ್ರಂಪ್...!!
ಹಲವು ವರ್ಷಗಳಿಂದಲೂ ಸೊಮಾಲಿಯಾ ದೇಶದ ಮೇಲೆ ಐಸಿಎಸ್ ಉಗ್ರರು ಹಿಡಿತವನ್ನು ಸಾಧಿಸಿದ್ದಾರೆ. ಹೀಗಿರುವಾಗಲೇ ಅಮೇರಿಕಾ ಸೇನೆ ಉಗ್ರರನ್ನು ಹುಡುಕಿ ಹತ್ಯೆ ಮಾಡುತ್ತಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು `ನಾವು ನಿಮ್ಮನ್ನು ಹುಡುಕಿ ಕೊಲ್ಲುತ್ತೇವೆ.
ಕಾರ್ಯಾಚರಣೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ರೀತಿಯ ಹಾನಿ ಆಗದು. ಈಗಾಗಲೆ ಉಗ್ರರು ಅನೇಕ ಕಡೆ ಅಧಿಪತ್ಯ ಸ್ಥಾಪಿಸುವ ಪ್ರಯತ್ನದಲ್ಲಿದ್ದು ಅವರ ಜಾಲವನ್ನು ಪತ್ತೆ ಹಚ್ಚಿ ಅಂತ್ಯ ಕಾಣಿಸುತ್ತೇವೆ ಎಂದು ಗುಡುಗಿದ್ದಾರೆ.