ಕಾಲ್ತುಳಿತದ ವಿಷ್ಯವನ್ನು ಮುಂದಿಟ್ಟುಕೊಂಡು ಕುಂಭಮೇಳಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ರೆ ಹುಷಾರ್- ಯೋಗಿ ಆದಿತ್ಯನಾಥ್...!!

  • 03 Feb 2025 01:15:06 PM

ಉತ್ತರ ಪ್ರದೇಶ: ಅದೆಷ್ಟೋ ವರ್ಷಗಳ ಬಳಿಕ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಕೋಟ್ಯಾನುಕೋಟಿ ಹಿಂದೂಗಳು ಈ ಪುಣ್ಯಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಜನಸಾಗರದಿಂದ ತುಂಬಿ ತುಳುಕುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮೊನ್ನೆ ನಡೆದ ಕಾಲ್ತುಳಿತ ಘಟನೆಯನ್ನು ಹಿಡಿದುಕೊಂಡೇ ಹಿಂದೂ ವಿರೋಧಿಗಳು ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 

ಹಿಂದೂ ವಿರೋಧಿಗಳು ಸಂತರ ತಾಳ್ಮೆ ಪರೀಕ್ಷೆ ಮಾಡೋದು ಬೇಡ- ಸಿಡಿದೆದ್ದ ಸಿಎಂ ಯೋಗಿ..!

 

ಕಾಲ್ತುಳಿತದ ದುರಂತದ ವಿಷಯವನ್ನು ಮುಂದಿಟ್ಟುಕೊಂಡು ಅನೇಕ ಹಿಂದೂ ವಿರೋಧಿಗಳು ಮಹಾಕುಂಭ ಮೇಳದ ವೈಭವಕ್ಕೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ರಾಜಕೀಯ ವಿರೋಧಿಗಳು ಇಂತಹ ಹುನ್ನಾರ ನಡೆಸೋದು ಬೇಡ. ಧರ್ಮ ವಿರೋಧಿಗಳು ಸಂತರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಈ ದುರ್ಘಟನೆ ಜಾಗತಿಕವಾಗಿ ಮುಜುಗರವಾಗಬೇಕು ಎಂದು ಆಡಂಬರವಾಗಿ ಸುದ್ದಿಯನ್ನು ಬಿತ್ತರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ. 

 

ಮೂವತ್ತೆರಡು ಕೋಟಿ ಜನ ಮಹಾಕುಂಭಮೇಳದ ವ್ಯವಸ್ಥೆ ಮೆಚ್ಚಿದ್ದಾರೆ...!!

 

ಈ ಬಗ್ಗೆ ಮಾತನಾಡಿದ ಯುಪಿ ಮುಖ್ಯಮಂತ್ರಿ ಕಾಲ್ತುಳಿತ ದುರಂತ ಸಂಭವಿಸಿದಾಗ ಸಂತರು ತಾಳ್ಮೆಯಿಂದ ವರ್ತಿಸಿದ್ದಾರೆ. ಕಳೆದ ಹತ್ತೊಂಭತ್ತು ದಿನಗಳಲ್ಲಿ ಮೂವತ್ತೆರಡು ಕೋಟಿ ಜನ ಮಹಾಕುಂಭಮೇಳದ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಾಳೆ ವಸಂತ ಪಂಚಮಿ ಇರಲಿದ್ದು ಅಸಂಖ್ಯಾತ ಸಂಖ್ಯೆಯಲ್ಲಿ ಜನ ತ್ರಿವೇಣಿ ಸಂಗಮಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭ ದುರಂತ ಸಂಭವಿಸದಂತೆ ಎಲ್ಲಾ ರೀತಿಯ ಮಜನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದ್ದಾರೆ.