ಬೆಂಗಳೂರು: ಜಗತ್ತು ಅದೆಷ್ಟೇ ಮುಂದುವರೆದರೂ ಕೂಡಾ ಇವತ್ತು ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಎಲ್ಲಿ ಹೋದ್ರೂ ಕೂಡಾ ಹೆಣ್ಮಕ್ಕಳನ್ನು ಕಾಮದ ದೃಷ್ಟಿಯಿಂದ ನೋಡುವ ಕಾಮುಕರು ಇದ್ದೇ ಇರುತ್ತಾರೆ. ಇದೀಗ ಪೊಲೀಸರ ಮಾರುವೇಷದಲ್ಲಿ ಯುವತಿಯರ ರೂಂಗೆ ನುಗ್ಗಿದ್ದ ಕಿಲಾಡಿಯೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಪೊಲೀಸ್ ಅಧಿಕಾರಿ ಸೋಗಿನಲ್ಲಿ ಯುವತಿಯರ ರೂಂಗೆ ಎಂಟ್ರಿ ಕೊಟ್ಟ ಭೂಪ..!!
ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಬಂದು ಯುವತಿಯರಿಗೆ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಆರೋಪಿ ಹೋಮ್‌ಗಾರ್ಡ್ ಅಗಿದ್ದು, ಪೊಲೀಸ್ ಅಧಿಕಾರಿಯಂತೆ ಯುವತಿಯರ ರೂಮ್‍ಗೆ ರಾತ್ರಿ ವೇಳೆ ನುಗ್ಗುತ್ತಿದ್ದ. ಅಲ್ಲದೇ ಯುವತಿಯರ ಬಳಿ ಅಶ್ಲೀಲವಾಗಿ ಮಾತನಾಡಿ ಅವರಿಗೆ ಟಾರ್ಚರ್ ಕೊಡುತ್ತಿದ್ದ.
ಈತ ಮಾಡ್ತಿದ್ದದ್ದು ಏನ್ ಗೊತ್ತಾ..?
ಕೇರಳದಿಂದ ವ್ಯಾಸಂಗದ ಉದ್ದೇಶದಿಂದ ಬೆಂಗಳೂರಿಗೆ ಬಂದು ಕಾಲೇಜೊಂದರಲ್ಲಿ 2ನೇ ವರ್ಷದ ಬಿಎಸ್‍ಸಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮೂವರು ಸ್ನೇಹಿತೆಯರ ಜೊತೆ ರೂಮ್ ಮಾಡಿಕೊಂಡಿದ್ದಳು. ಜ.25ರಂದು ಊಟ ಮಾಡಿ ಮಲಗಿದ್ದಾಗ ಆರೋಪಿ ಬಾಗಿಲು ತಟ್ಟಿದ್ದ. ಬಾಗಿಲು ತೆಗೆದಾಗ ನಾನು ಪೊಲೀಸ್ ಸೈಡ್ ಬಿಡಿ ಅಂತ ಹೇಳಿ ಒಳಗಡೆ ಹೋಗಿದ್ದ. ಯುವತಿ ಆಕೆಯ ಸ್ನೇಹಿತನಿಗೆ ಕರೆ ಮಾಡಿ ಪೊಲೀಸರು ಬಂದಿದ್ದಾರೆ ಎಂದು ತಿಳಿಸಿದ್ದಳು. ಆರೋಪಿ ಡೋರ್ ಲಾಕ್ ಮಾಡಿ, ಎಲ್ಲರ ಮೊಬೈಲ್‍ನ್ನು ಹೆದರಿಸಿ ಕಸಿದುಕೊಂಡಿದ್ದ.
ಬಳಿಕ ಯುವತಿ ಕೈಯಲ್ಲಿದ್ದ ಹಾವಿನ ಟ್ಯಾಟೋ ನೋಡಿ ಅಸಭ್ಯವಾಗಿ ಮಾತನಾಡಿದ್ದ. ಯುವತಿಯರಿಗೆ ಮಂಡಿಕಾಲಿನಲ್ಲಿ ನಿಲ್ಲಿಸಿ ಟಾರ್ಚರ್ ನೀಡಿದ್ದ. 1:30 ಸುಮಾರಿಗೆ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಸದಾಶಿವನಗರ ಠಾಣೆ ಪೊಲೀಸರು ಪರಿಶೀಲಿಸಿ ತನಿಖೆ ಮಾಡಿದ್ದಾರೆ. ಆಗ ಈತನ ಮುಖವಾಡ ಕಳಚಿ ಬಿದ್ದಿದೆ. ಪೊಲೀಸರು ಬಂಧಿಸಿದ್ದಾರೆ.