ಕೇರಳ: ವಿವಾಹವಾದ ಹೊಸತರಲ್ಲಿ ಎಲ್ಲವೂ ಚಂದ. ಕಾಲಕ್ರಮೇಣ ಪ್ರತಿಯೊಬ್ಬರ ನಿಜವಾದ ಬಣ್ಣ ಬಯಲಾಗುತ್ತದೆ. ಮದುವೆಗೂ ಮುನ್ನ ರಾಣಿಯಂತೆ ನೋಡಿಕೊಳ್ಳುತ್ತೇನೆ ಎನ್ನುವ ಪುರುಷ ಮದ್ವೆಯಾದ ಬಳಿಕ ನಾಯಿಗಿಂತಲೂ ಕಡೆಯಾಗಿ ಪತ್ನಿಯನ್ನು ನೋಡಿಕೊಳ್ಳುತ್ತಾನೆ. ಇದರಿಂದಲೇ ಮನನೊಂದು ಕೆಲವರ ಜೀವನ ದುರಂತ ಅಂತ್ಯ ಕಾಣುತ್ತದೆ. ಇಲ್ಲಿ ಆದದ್ದು ಹಾಗೇ. ಮದ್ವೆಯಾದ ಎರಡು ವರ್ಷದಲ್ಲೇ ಪತ್ನಿ ಜೀವಾಂತ್ಯಗೊಳಿಸಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಸುಂದರವಾಗಿಲ್ಲ, ಉದ್ಯೋಗವೂ ಇಲ್ಲ ಎಂದು ಚುಚ್ಚು ಮಾತು ಆಡ್ತಿದ್ದ ಗಂಡ...!!
ಎರಡು ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಹೋಗಿ ಗಂಡನ ಕ್ರೌರ್ಯವನ್ನು ಸಹಿಸಲಾರದೆ ಮನನೊಂದು ಅದೇ ಮನೆಯಲ್ಲಿ ಪತ್ನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ವಿಷ್ಣುಜಾ ಆತ್ಮಹತ್ಯೆಗೊಳಗಾದ ಯುವತಿ. ಆಕೆಯ ಪತಿ ಪ್ರಬಿನ್ ಅವಳನ್ನು ತೆಳ್ಳಗಿದ್ದೀಯಾ...ನೀನು ಸ್ವಲ್ಪನೂ ಅಂದವಾಗಿಲ್ಲ, ನಿನಗೆ ಉದ್ಯೋಗನೂ ಇಲ್ಲ ಎಂದು ನಿಂದಿಸುತ್ತಿದ್ದನಂತೆ. ಇದೇ ವಿಷ್ಯಕ್ಕೆ ಪ್ರತೀ ಬಾರಿ ಗಲಾಟೆ ಮಾಡುತ್ತಿದ್ದ ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆಕೆಯ ಗಂಡನ ವಿರುದ್ಧ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿಷ್ಣುಜಾ..!!
ವಿಷ್ಣುಜಾ ಹಾಸ್ಟೆಲ್ ನಲ್ಲಿ ಇರುವಾಗಲೇ ವಿಷ್ಣುಜಾ ಬ್ಯಾಕಿಂಗ್ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳುತ್ತಿದ್ದಳು. ಆ ಸಂದರ್ಭ ಈತ ಅವಳನ್ನೇ ಮದುವೆಯಾಗುವಂತೆ ಹಠ ಹಿಡಿದಿದ್ದ. ಆದರೆ ಮದುವೆಯ ಬಳಿಕ ಅವನ ನಿಜರೂಪವನ್ನು ಬಯಲು ಮಾಡಿದ್ದಾನೆ. ಅತ್ಯಂತ ಆತ್ಮವಿಶ್ವಾಸ ಹೊಂದಿದ್ದ ಈಕೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಅವನೇ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ಪೊಲೀಸರಿಂದ ತನಿಖೆ ನಡೆಯುತ್ತಿದೆ.