ಪುತ್ತೂರು: ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದೆ. ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ತರುಣರು ಗಾಂಜಾ, ಡ್ರಗ್ಸ್, ಮದ್ಯ, ಧೂಮಪಾನ ಮುಂತಾದ ಚಟಗಳಿಗೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವರು ಅಮಲಿನಲ್ಲಿ ಏನು ಮಾಡುತ್ತಾರೆ ಎಂಬುವುದು ಅವರಿಗೇ ಅರಿವಿರುವುದಿಲ್ಲ ಅನ್ನೋದು ಸತ್ಯ. ಇದಕ್ಕೆ ಸಾಕ್ಷಿಯಾಗಿ ದ.ಕ ಜಿಲ್ಲೆಯ ಪುತ್ತೂರಿನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ.
ಗಾಂಜಾ ಎಫೆಕ್ಟ್..! ಇನ್ನೂರು ಮನೆಗಳ ನೀರಿನ ಪೈಪ್ ಕಟ್..!
ಪುತ್ತೂರಿನ ಜಿಡೆಕಲ್ಲಿನಲ್ಲಿ ಗಾಂಜಾ ವ್ಯಸನಿಯೊಬ್ಬ ಇನ್ನೂರಕ್ಕೂ ಹೆಚ್ಚು ಮನೆಗಳಿಗೆ ಹೋಗುವ ಕುಡಿಯುವ ನೀರಿನ ಪೈಪ್ ಕಟ್ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ. ಯೋಗಿಶ್ ಪೂಜಾರಿ ಎಂಬಾತ ಪೈಪ್ ತುಂಡರಿಸಿ ಪುಂಡಾಟ ಮೆರೆದ ಯುವಕನಾಗಿದ್ದಾನೆ. ಈತನಿಗೆ ತಾನು ಅಮಲಿನಲ್ಲಿ ಏನು ಮಾಡಿದ್ದಾನೆ ಎಂಬುವುದೇ ಅರಿವಿಲ್ಲ.ಆದರೆ ಈತ ಮಾಡಿದ ಕೆಲಸದಿಂದ ಊರವರು ತೊಂದರೆಯನ್ನು ಅನುಭವಿಸುವಂತಾಗಿದೆ.
ಊರಿನವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಯುವಕ ಇದೀಗ ಪೊಲೀಸರ ಅತಿಥಿ..!!
ಜಿಡೆಕಲ್ಲು ಶಾಲಾ ಸಮೀಪದಲ್ಲಿರುವ ನೀರಿನ ಟ್ಯಾಂಕ್ ನಿಂದ ಸಂಪರ್ಕವಿರುವ ಎಲ್ಲಾ ಪೈಪ್ ಗಳನ್ನು ಕಟ್ ಮಾಡಿದ್ದಾನೆ. ಈತ ಕಳೆದ ಮೂರ್ನಾಲ್ಕು ದಿನಗಳಿಂದ ಊರಿನಲ್ಲಿ ಸಿಕ್ಕ ಸಿಕ್ಕವರಿಗೆ ಅಸಹ್ಯ ಮಾತುಗಳಿಂದ ನಿಂದಿಸುತ್ತಾ ಕಿರಿಕಿರಿ ಮಾಡುತ್ತಿದ್ದ ಎಂದು ಊರವರು ಆರೋಪಿಸಿದ್ದಾರೆ. ಪೈಪ್ ಕಟ್ ಮಾಡುವಾಗ ಸಿಕ್ಕಿಬಿದ್ದ ಈತ ಎಸ್ಕೇಪ್ ಆಗಿ ಬೆಂಗಳೂರಿಗೆ ಹೋಗಿದ್ದ. ರೈಲಿನಲ್ಲಿ ಊರಿಗೆ ಹಿಂತಿರುಗುವ ವೇಳೆ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.