ಇವರೆಂಥಾ ತೆವಲು ನಾಯಿಗಳು..!! ಬಾಲಕಿಯ ಮೇಲೆರಗಿದ ಕಾಮುಕ ಸುಲೇಮಾನ್..!! ವೀಡಿಯೋ ಮಾಡಿದ ಕಾಮದಾಹಿ ಅಲ್ತಾಫ್..!! ಇಬ್ಬರೂ ಅರೆಸ್ಟ್..!

  • 05 Feb 2025 11:31:51 AM

ಗದಗ: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಪ್ರಾಪ್ತೆಯರನ್ನೂ ಬಿಡದ ಕಾಮ ಪಿಶಾಚಿಗಳು ಅತ್ಯಾಚಾರ ಮಾಡಿ ಹತ್ಯೆ ಮಾಡುತ್ತಿದ್ದಾರೆ. ಕಾನೂನುಗಳಂತೂ ಸತ್ತು ಹೋಗಿದೆ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಹಿಂದೆ ಮುಂದೆ ನೋಡುತ್ತಿದೆ. ಕಾನೂನಿನ ಭಯವಿಲ್ಲದೆ ಕಾಮಪಿಪಾಸುಗಳು ಇಂತಹ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದೀಗ ಕರ್ನಾಟಕದ ಮತ್ತೊಂದು ಕಡೆ ಇಂತಹ ಪೈಶಾಚಿಕ ಕೃತ್ಯ ನಡೆದಿದೆ.

 

ಬಾಲಕಿಯ ಮೇಲೆ ನಡೆಯಿತು ಸಾಮೂಹಿಕ ಅತ್ಯಾಚಾರ..!!

 

ಎಂಟು ವರ್ಷದ ಬಾಲಕಿಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್ ತಿಂಗಳಲ್ಲಿ ಈ ದುಷ್ಕೃತ್ಯ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯೂ ಕೂಡಾ ಬಾಯ್ಬಿಟ್ಟಿರಲಿಲ್ಲ. ಅತ್ಯಾಚಾರಿ ಆರೋಪಿ ಸುಲೇಮಾನ್ ಸೇರಿದಂತೆ ಅತ್ಯಾಚಾರ ಎಸಗುವುದನ್ನು ವಿಡಿಯೋ ಮಾಡಿದ್ದ ಅಲ್ತಾಫ್ ಎನ್ನುವಾತನನ್ನು ಸಹ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಅಪ್ರಾಪ್ತೆಯನ್ನೂ ಬಿಡದ ಆರೋಪಿಗಳ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.

 

ತಡವಾಗಿ ಬೆಳಕಿಗೆ ಬಂದ ಪ್ರಕರಣ, ಆರೋಪಿಗಳು ಅರೆಸ್ಟ್..!

 

ಡಿಸೆಂಬರ್ ತಿಂಗಳಿನಲ್ಲಿ ಈ ಕೃತ್ಯ ನಡೆದಿದ್ದರೂ ಬಾಲಕಿಯೂ ಈ ವಿಚಾರವನ್ನು ಭಯಪಟ್ಟು ಯಾರಿಗೂ ತಿಳಿಸಿರಲಿಲ್ಲ. ಆದರೆ ಸ್ವಲ್ಪ ದಿನದ ನಂತರ ಅನುಮಾನ ಬಂದು ಹೆತ್ತವರು ಕೇಳಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಇದರಿಂದ ಆತಂಕಗೊಂಡ ಪೋಷಕರು ಕೂಡಲೇ ಪೊಲೀಸ್ ಠಾಣೆಗೆ ಅವರ ವಿರುದ್ಧ ದೂರು ನೀಡಿದ್ದಾರೆ. ಬಾಲಕಿ ಎಂದೂ ನೋಡದೆ ಅವಳ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಅದನ್ನು ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಕ್ಕೆ ಕಠಿಣ ಶಿಕ್ಷೆ ಆಗಬೇಕು ಎಂದು ಊರಿನವರು ಆಕ್ರೋಶವನ್ನು ವ್ಯಕ್ತಪಡಿಸಿ ಆಗ್ರಹಿಸಿದ್ದಾರೆ.