ಪುಣೆ: ಭಾರತೀಯ ಚಿತ್ರರಂಗದಲ್ಲಿ ತನ್ನ ಧ್ವನಿಯ ಮೂಲಕವೇ ಜನಪ್ರಿಯತೆ ಗಳಿಸಿದ ಖ್ಯಾತ ಗಾಯಕ ಸೋನುನಿಗಮ್ ಎಲ್ಲರಿಗೂ ಚಿರಪರಿಚಿತ. ತನ್ನ ಕಂಠಕ್ಕೆ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಧ್ವನಿ ಮಾಂತ್ರಿಕ. ಮಹಿಳಾ ಗಾಯಕಿ ಶ್ರೇಯಾ ಘೋಷಲ್ ಗೂ ಇದೇ ರೀತಿಯ ಅಭಿಮಾನಿಗಳಿದ್ದಾರೆ. ಇದೀಗ ಸೋನುನಿಗಮ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲೇ ದುರಂತವೊಂದು ನಡೆದಿದೆ.
ಸೋನುನಿಗಮ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!!
ಭಾನುವಾರ ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನುನಿಗಮ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಇದೀಗ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ವಿಪರೀತ ಬೆನ್ನುನೋವಿನಿಂದ ಬಳಲುತ್ತಿದ್ದ ಇವರು ಆರೋಗ್ಯ ಸಮಸ್ಯೆ ಇದ್ದರೂ ನಿರ್ಲಕ್ಷಿಸಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಈ ಕುರಿತು ಆಸ್ಪತ್ರೆಯಿಂದಲೇ ವೀಡಿಯೋ ಶೇರ್ ಮಾಡಿದ ಸ್ಟಾರ್ ಸಿಂಗರ್...!
ನಾನು ಸಂಗೀತ ಕಾರ್ಯಕ್ರಮದಲ್ಲಿ ವೇದಿಕೆ ತುಂಬಾ ಓಡಾಡುತ್ತೇನೆ. ನನಗೆ ಮೊದಲೇ ಬೆನ್ನುನೋವಿತ್ತು. ಆದರೂ ಕಡೆಗಣಿಸಿ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆಗಲೂ ವೇದಿಕೆ ತುಂಬಾ ಓಡಾಡಿದ್ದೆ. ಆಗ ಮತ್ತೆ ಬೆನ್ನುನೋವು ಶುರುವಾಯಿತು. ಅದು ಹೆಚ್ಚಾಗಿ ಬೆನ್ನಿಗೆ ಯಾರೋ ಇಂಜೆಕ್ಷನ್ ನಲ್ಲಿ ಚುಚ್ಚಿದಂತೆ ಫೀಲ್ ಆಯ್ತು. ಈಗ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಆಸ್ಪತ್ರೆಯಲ್ಲೇ ತನ್ನ ಹೆಲ್ತ್ ಅಪ್ಡೇಟ್ಸ್ ಬಗ್ಗೆ ವೀಡಿಯೋ ಶೇರ್ ಮಾಡಿದ್ದಾರೆ.