ಪುತ್ತೂರು|ಬೈಕ್ ಮತ್ತು ರಿಕ್ಷಾ ಮಧ್ಯೆ ಭೀಕರ ಅಪಘಾತ..!! ವೀಡಿಯೋಗ್ರಾಫರ್ ಆಗಿದ್ದ ಬೈಕ್ ಸವಾರ ಸ್ಪಾಟ್ ಡೆತ್..!! ಬದುಕುಳಿದ ಬಾಲಕ..!!

  • 06 Feb 2025 01:05:26 PM

ಪುತ್ತೂರು: ನಾವು ರಸ್ತೆಯಲ್ಲಿ ಸಂಚರಿಸುವಾಗ ಅತ್ಯಂತ ಜಾಗರೂಕತೆಯಿಂದ ಚಲಿಸಬೇಕಾಗುತ್ತದೆ. ಮೂಲ ರಸ್ತೆ ಸಾರಿಗೆ ನಿಯಮಗಳನ್ನು ಪಾಲಿಸುತ್ತಾ ಆತುರದಿಂದ ವಾಹನಗಳನ್ನು ಚಾಲನೆ ಮಾಡದೆ ನಿಧಾನಗತಿಯಲ್ಲಿ ಚಲಿಸಿದರೆ ಸಂಭವಿಸುವ ದೊಡ್ಡ ಅಪಾಯದಿಂದ ಪಾರಾಗಬಹುದು. ಆದರೆ ಎಷ್ಟೋ ಸಲ ನಿಯಮಗಳನ್ನು ಪಾಲಿಸದೆಯೋ ಅಥವಾ ಹಾಳಾದ ರಸ್ತೆಯಿಂದಲೋ ಅನಿರೀಕ್ಷಿತವಾಗಿ ಕೆಲವೊಮ್ಮೆ ದುರಂತಗಳು ಸಂಭವಿಸುತ್ತದೆ. ಇದೀಗ ಪುತ್ತೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಮನಕಲಕುವಂತಿದೆ...

 

ಬೈಕ್ ಮತ್ತು ರಿಕ್ಷಾ ಮಧ್ಯೆ ಭೀಕರ ಅಪಘಾತ, ದ್ವಿಚಕ್ರ ಸವಾರ ದಾರುಣ ಅಂತ್ಯ..!

 

ಬೈಕ್ ಮತ್ತು ಆಟೋ ರಿಕ್ಷಾ ಪರಸ್ಪರ ಢಿಕ್ಕಿಯಾಗಿ ಓರ್ವ ದಾರುಣ ಅಂತ್ಯಗೊಂಡು, ಬಾಲಕನೋರ್ವ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಪುತ್ತೂರು ಹೊರವಲಯದ ಮುರ ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಖಾಸಗಿ ವಾಹಿನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಚೇತನ್ ಕೆಮ್ಮಿಂಜೆ ಸಾವನ್ನಪ್ಪಿದ ವ್ಯಕ್ತಿ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಎಂಬಲ್ಲಿ ಬೈಕ್ ಹಾಗೂ ರಿಕ್ಷಾ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಚೇತನ್ ಅವರು ನೆಹರೂನಗರದ ಮತಾವುನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು ಅಲ್ಲಿಂದ ಬಾಲಕನನ್ನು ಚರುಮುರಿ ತಿನ್ನಲು ಕರೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. 

 

ಅಪಘಾತದ ತೀವ್ರತೆಗೆ ರಸ್ತೆಗೆ ಎಸೆಯಲ್ಪಟ್ಟ ಬಾಲಕ...!

 

ಅಪಘಾತ ಸಂಭವಿಸಿದ ರಭಸಕ್ಕೆ ಸವಾರ ಹಾಗೂ ಬಾಲಕ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಬಾಲಕ ಗಾಯಗೊಂಡು ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಬಾಲಕ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.