ನಟಿಯರ ಖಾಸಗಿ ವೀಡಿಯೋಗಳನ್ನು ಲೀಕ್ ಮಾಡಿದ ಖ್ಯಾತ ಯೂಟ್ಯೂಬರ್..!! ೨೦೦ಕ್ಕೂ ಅಧಿಕ ನಗ್ನ‌ ವೀಡಿಯೋಗಳು ಸೋರಿಕೆ..!!

  • 06 Feb 2025 01:15:32 PM

ಇತ್ತೀಚಿನ ದಿನಗಳಲ್ಲಿ ಮಾನ ಹರಾಜಿಗೆ ಹಾಕಿ ದುಡ್ಡು ಮಾಡೋದು ಸಂಪಾದನೆಯ ಮಾರ್ಗವಾಗಿ ಬಿಟ್ಟಿದೆ. ಸಂಸ್ಕೃತಿ- ಸಂಪ್ರದಾಯಗಳು ಮಣ್ಣಾಗಿ ಹೋಗಿದೆ. ಅಶ್ಲೀಲ ವೀಡಿಯೋಗಳು ಜನರ ಮನಸ್ಥಿತಿಯನ್ನೆ ಬದಲಾಯಿಸಿಬಿಟ್ಟಿದೆ.

 

ಅರ್ಧಂಬರ್ಧ ಬಟ್ಟೆ ಧರಿಸಿ ಕುಣಿಯುವ ಸೆಲೆಬ್ರಿಟಿಗಳಿಂದ ಯಾವುದೋ ಮುಗ್ಧ ಹೆಣ್ಣು ಅತ್ಯಾಚಾರಕ್ಕೆ ಒಳಗಾಗುವಂತಾಗಿದೆ. ಇದೀಗ ಖ್ಯಾತ ಯೂಟ್ಯೂಬರ್ ಒಬ್ಬ ನಟಿಯರ ಅಶ್ಲೀಲ ವೀಡಿಯೋಗಳನ್ನು ಲೀಕ್ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. 

 

ಹುಡುಗಿಯರ ಖಾಸಗಿ ವೀಡಿಯೋ ಲೀಕ್, ಯೂಟ್ಯೂಬರ್ ಮಸ್ತಾನ್ ಸಾಯಿ ಅರೆಸ್ಟ್...!!

 

ಚಿತ್ರರಂಗದ ಹಲವು ಹೀರೋಯಿನ್ ಗಳ, ಬೇರೆ ಹುಡುಗಿಯರ ಖಾಸಗಿ ವೀಡಿಯೋಗಳನ್ನು ಸೋರಿಕೆ ಮಾಡಿದ ಆರೋಪದಡಿ ಯೂಟ್ಯೂಬರ್ ಮಸ್ತಾನ್ ಸಾಯಿ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 

ಆತನಲ್ಲಿದ್ದ ಹಾರ್ಡ್ ಡಿಸ್ಕನ್ನು ಪೊಲೀಸರು ಜಫ್ತಿ ಮಾಡಿದ್ದು ಅದರಲ್ಲಿ ಇನ್ನೂರಕ್ಕೂ ಅಧಿಕ ನಗ್ನ ವೀಡಿಯೋಗಳು ಇರೋದು ಪತ್ತೆಯಾಗಿದೆ. ಈತ ನೋಡಲೂ ಕಾಮಪಿಶಾಚಿಯಂತೆ ಇದ್ದು ಹೆಣ್ಮಕ್ಕಳ ಜೊತೆ ಸಲುಗೆಯಲ್ಲಿ ವರ್ತಿಸಿ ನಂತರ ತನ್ನ ಬುಟ್ಟಿಗೆ ಬೀಳಿಸುತ್ತಿದ್ದ. ತನ್ನಲ್ಲಿರುವ ವೀಡಿಯೋಗಳನ್ನು ವೀಕ್ಷಿಸಿ ವಿಕೃತ ಆನಂದ ಪಡೆಯುತ್ತಿದ್ದ ಎಂಬುವುದು ತನಿಖೆಯಲ್ಲಿ ಬಯಲಾಗಿದೆ. 

 

ಲವ್, ಮದ್ವೆ ಹೆಸರಲ್ಲಿ ವಂಚಿಸುತ್ತಿದ್ದ ಮಸ್ತಾನ್ ಸಾಯಿ..!!

 

ಈತನ ಬಗ್ಗೆ ಯುವ ನಟಿಯೋರ್ವಳು ದೂರು ನೀಡಿದ್ದು ಈತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾಳೆ. ಆತನ ಹಾರ್ಡ್ ಡಿಸ್ಕನ್ನು ಈ ಯುವತಿಯೇ ಪೊಲೀಸರಿಗೆ ನೀಡಿದ್ದಾಳೆ.

 

ಈತನ ಹಾರ್ಡ್ ಡ್ರೈವ್ ನಲ್ಲಿ ಹಲವಾರು ಚಿತ್ರರಂಗದ ನಟಿಯರ ನಗ್ನ ವೀಡಿಯೋಗಳು ಪತ್ತೆಯಾಗಿದೆ. ಈತ ಪ್ರೀತಿ, ಮದುವೆ ಹೆಸರಲ್ಲಿ ಹುಡುಗಿಯರ ಜೊತೆ ಕ್ಲೋಸ್ ಆಗಿ ಮತ್ತೆ ತನ್ನ ಉದ್ದೇಶವನ್ನು ಪೂರೈಸಿಕೊಳ್ಳುತ್ತಿದ್ದನಂತೆ. ಇದೀಗ ನರಸಿಂಗಿ ಪೊಲೀಸರು ಮುಸ್ತಾನ್ ಸಾಯಿಯನ್ನು ವಶಕ್ಕೆ ಪಡೆದಿದ್ದಾರೆ.