ಸಲ್ಮಾನ್, ಸಾಜೀದ್ ಖತರ್ನಾಕ್ ಅಪ್ಪ ಮಗ ಅರೆಸ್ಟ್!: ಇಬ್ಬರೂ ಸೇರಿ ಲಪಟಾಯಿಸಿದ್ದು ಒಂದಲ್ಲ, ಎರಡಲ್ಲ..ಬರೋಬ್ಬರಿ 93 ಮೊಬೈಲ್...!!

  • 06 Feb 2025 01:22:59 PM

ಜೀವನೋಪಾಯಕ್ಕಾಗಿ ಮನುಷ್ಯ ನೂರೆಂಟು ದಾರಿಗಳನ್ನು ಹಿಡಿಯುತ್ತಾನೆ. ಕೆಲವರು ಕಷ್ಟಪಟ್ಟು ಮೇಲೆ ಬಂದರೆ, ಇನ್ನೂ ಕೆಲವರು ಸುಲಭದ, ತಪ್ಪು ದಾರಿಗಳನ್ನು ಹಿಡಿದು ಬೇಗ ಶ್ರೀಮಂತರಾಗುವ ಹಪಹಪಿಕೆಯಲ್ಲಿರುತ್ತಾರೆ. ಆದರೆ ಮುಂದುವರೆದ ಈಗಿನ ಜಗತ್ತಿನಲ್ಲಿ ತಾವು ಮಾಡಿದ ತಪ್ಪಿನಿಂದ ಸೇಫ್ ಆಗ್ತೇವೆ ಅಂತ ಅದು ಹೇಗೆ ಯೋಚಿಸ್ತಾರೋ ಗೊತ್ತಿಲ್ಲ. ಇಲ್ಲೊಬ್ಬ ಅಪ್ಪ-ಮಗ ಅಂತಹುದೇ ದಾರಿ ಹಿಡಿದು ಹೋಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. 

 

ಸಾರ್ವಜನಿಕರ ಬಳಿ ಇದ್ದ ಮೊಬೈಲ್ ಎಗರಿಸುತ್ತಿದ್ದ ತಂದೆ-ಮಗ ಅರೆಸ್ಟ್...!!

 

ಸಾರ್ವಜನಿಕರ ಬಳಿ ಇದ್ದ ಮೊಬೈಲ್ ಗಳನ್ನು ಎಗರಿಸಿ ಎಸ್ಕೇಪ್ ಆಗುತ್ತಿದ್ದ, ಒಟ್ಟು ಈವರೆಗೆ ತೊಂಬತ್ತಮೂರು ಮೊಬೈಲ್ ಗಳನ್ನು ಕಳವು ಮಾಡಿದ್ದ ಖತರ್ನಾಕ್ ಅಪ್ಪ- ಮಗ , ಮತ್ತೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸಲ್ಮಾನ್, ಸಾಜಿದ್ ಹಾಗೂ ಫಾರೂಖ್ ಬಂಧಿತ ಆರೋಪಿಗಳು. ಮಗ ಮೊಬೈಲ್ ಕಳ್ಳತನ ಮಾಡಿದ್ರೆ ಅಪ್ಪ ಅದನ್ನು ಮಾರುತ್ತಿದ್ದ. ಇದೀಗ ಮೂವರನ್ನೂ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯಲ್ಲಿ ಈವರೆಗೆ ಇವರು ಒಟ್ಟು ತೊಂಭತ್ತ ಮೂರು ಮೊಬೈಲ್ ಗಳನ್ನು ಎಗರಿಸಿರುವುದರ ಬಗ್ಗೆ ಮಾಹಿತಿ ಲಭಿಸಿದೆ. 

 

ಆರೋಪಿಗಳು ಮೊಬೈಲ್ ಕಳ್ಳತನ ಮಾಡುತ್ತಿದ್ದದ್ದು ಹೇಗೆ ಗೊತ್ತಾ..?

 

ವಾಕಿಂಗ್ ಮಾಡುವಾಗ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇವರು ಹೆಚ್ಚು ಕಳ್ಳತನ ಮಾಡುತ್ತಿದ್ದರು. ಕದ್ದು ಎಕ್ಸ್ಪರ್ಟ್ ಆಗಿದ್ದ ಇವರಿಗೆ ಈ ಕೃತ್ಯ ಎಸಗೋದು ಮಾಮೂಲಿಯಾಗಿತ್ತು. ಐಫೋನ್ ಸಿಕ್ರೂ ಕದಿಯದೆ ಬೇರೆ ಮೊಬೈಲ್ ಇವರು ಹೆಚ್ಚು ಹೊಂಚು ಹಾಕುತ್ತಿದ್ದರಂತೆ. ಏಕೆಂದರೆ ಐಫೋನ್‌ ಎಗರಿಸಿದರೆ ಬೇಗ ಸಿಕ್ಕಿಬೀಳುವ ಭಯ ಇವರನ್ನು ಕಾಡಿತ್ತು. ಮಹದೇವಪುರ ಪೊಲೀಸರು ಒಟ್ಟು ಮೂವತ್ತು ಲಕ್ಷ ಮೌಲ್ಯದ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.