ಶಿಕ್ಷಣ ಇದ್ದರೂ, ತಮ್ಮದೇ ಆದಂತಹ ಪ್ರತಿಭೆ, ಹೊಸ ಕಲೆಗಳಿದ್ದರೂ ಕೂಡಾ ಅನೇಕ ಜನ ಉದ್ಯೋಗಕ್ಕಾಗಿ ಅಲೆದಾಡುತ್ತಿರುತ್ತಾರೆ. ಸೂಕ್ತ ವಿದ್ಯಾರ್ಹತೆ ಇದ್ದರೂ ವೇತನ ಅಷ್ಟಿಲ್ಲ ಎಂದು ನಿರಾಶೆಯಿಂದ ಉದ್ಯೋಗವನ್ನು ಕಳೆದುಕೊಳ್ಳುವವರೂ ಇದ್ದಾರೆ. ಒಟ್ಟಾರೆಯಾಗಿ ಕೆಲಸವಿಲ್ಲದೆ ಅಲೆದಾಡುತ್ತಿರುವ ನಿರುದ್ಯೋಗಿಗಳಿಗೆ ಶುಭಸುದ್ದಿಯೊಂದು ಕೇಳಿಬಂದಿದೆ.
ಈ ಇಲಾಖೆಯಲ್ಲಿದೆ ಉದ್ಯೋಗವಕಾಶ...!! ಅರ್ಜಿ ಸಲ್ಲಿಸಿ
ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯ ಗ್ರೂಪ್ ಡಿ ವಿಭಾಗದಲ್ಲಿ ಜವಾನ ಹುದ್ದೆ ಖಾಲಿಯಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಫೆಬ್ರವರಿ ಇಪ್ಪತ್ತೆಂಟು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿ ಕಡ್ಡಾಯವಾಗಿ ಎಸ್ಎಸ್ಎಲ್ ಸಿ ಪಾಸ್ ಆಗಿರಬೇಕು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ..?
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ನಿಂದ ಅರ್ಜಿ ನಮೂನೆ ಪಡೆದು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಅಲ್ಲಿ ಕೇಳಿರುವ ಎಲ್ಲಾ ದಾಖಲೆ ಪತ್ರಗಳನ್ನು ಜೆರಾಕ್ಸ್ ಮಾಡಿ ಅರ್ಜಿಯೊಂದಿಗೆ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಟ ಹದಿನೆಂಟು ವರ್ಷ ಮತ್ತು ಗರಿಷ್ಠ ಹತ್ತು ವರ್ಷ ವಯೋಮಿತಿ ಹೊಂದಿರಬೇಕು. ಯಾವುದೇ ರೀತಿಯ ಅರ್ಜಿ ಶುಲ್ಕ ಕಟ್ಟಬೇಕಾಗಿಲ್ಲ. ಈ ಹುದ್ದೆಗೆ ಮಾಸಿಕ ವೇತನ 17000ರೂ.ಗಳಿಂದ 28950ರೂ.ವರೆಗೆ ನಿಗದಿ ಮಾಡಲಾಗಿದೆ.