ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಅನೇಕ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಕೂಡಾ ಮಹಿಳೆ ಏಕಾಂಗಿಯಾಗಿ ರಾತ್ರಿ ಹೊತ್ತು ನಡೆದಾಡುವಂತಿಲ್ಲ. ಭಯದಲ್ಲೇ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಯ ಪುರುಷರನ್ನೂ ನಂಬಲು ಅಸಾಧ್ಯವಾದ ಕಾಲವಿದು. ಹೀಗಿರುವಾಗ ಇಲ್ಲೊಬ್ಬ ವಿದ್ಯಾರ್ಥಿ ಮಹಿಳೆಯರಿಗೆ ಪೂರಕವಾಗುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಶೂ ಒಂದನ್ನು ತಯಾರು ಮಾಡಿದ್ದಾನೆ. ಇದನ್ನು ಧರಿಸಿದರೆ ಸಾಕು ಮಹಿಳೆಯರು ಯಾವುದಕ್ಕೂ, ಯಾರಿಗೂ ಹೆದರುವ ಅವಶ್ಯಕತೆ ಇಲ್ಲವಂತೆ....
ಈ ಶೂ ಧರಿಸಿದ ಯುವತಿಯನ್ನು ಟಚ್ ಮಾಡೋ ಮೊದ್ಲು ಹುಷಾರ್...!!
ಹೆಣ್ಣು ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು ಹೆಣ್ಣು ಮಕ್ಕಳ ಭದ್ರತೆಗಾಗಿ ರಾಜಸ್ಥಾನದ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬ ಇಲೆಕ್ಟ್ರಿಕ್ ಶೂ ಕಂಡಿಹಿಡಿದಿದ್ದಾನೆ. ಈ ಶೂ ಧರಿಸಿದ ಯುವತಿಯರನ್ನು ಮುಟ್ಟಿದ್ರೆ ಕರೆಂಟ್ ಶಾಕ್ ಆಗುತ್ತೆ.
ಜೊತೆಗೆ ಹುಡುಗಿ ಇರುವ ಸ್ಥಳದ ಬಗ್ಗೆ ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ದೊರೆಯುತ್ತದೆ. ಅಲ್ವಾರ್ ನ ಲಕ್ಷ್ಮಣ್ ಗಢದ ಲಿಲಿ ಗ್ರಾಮದ ನಿವಾಸಿ ವಿವೇಕ್ ಚೌಧರಿ ಈ ಎಲೆಕ್ಟ್ರಿಕ್ ಶೂ ತಯಾರಿಸಿದ ಯುವಕನಾಗಿದ್ದಾನೆ. ಹುಡುಗಿಯರು ಪುರುಷರಿಂದ ಸಂಕಷ್ಟಕ್ಕೆ ಸಿಲುಕಿದಾಗ ಅವರು ನೀಡುವ ಒಂದು ಸಣ್ಣ ಸಿಗ್ನಲ್ ನಿಂದಾಗಿ ಆಕೆಯ ಮನೆಯವರಿಗೆ ಅವರಿರುವ ಸ್ಥಳದ ಮಾಹಿತಿ ಸಂಪೂರ್ಣವಾಗಿ ಲಭಿಸುತ್ತದೆ.
ಈ ಎಲೆಕ್ಟ್ರಿಕ್ ಶೂ ಹೇಗೆ ಕೆಲಸ ಮಾಡುತ್ತೆ ಗೊತ್ತಾ..?
ಹುಡುಗಿಯರು ಅಥವಾ ಯಾವುದೇ ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿದ್ದರೆ ಅವರು ಧರಿಸಿರುವ ಈ ಶೂವಿನಲ್ಲಿ ಹಿಮ್ಮಡಿಯನ್ನು ಕಾಲಿನಿಂದಲೇ ಬಲವಾಗಿ ಒತ್ತಿದರೆ ಆ ಸಾಧನದಿಂದ ಹೊರಬರುವ ಕರೆಂಟ್ ಆಗ ಕಾರ್ಯಚಾಲಿತವಾಗುತ್ತದೆ. ಇದರಿಂದ ವಿದ್ಯುತ್ ಆಘಾತವಾಗುತ್ತದೆ. ಈ ಶೂವಿನಲ್ಲಿ ಜಿಪಿಎಸ್ ಅಳವಡಿಸಿರುವುದರಿಂದ ಸ್ಥಳದ ಮಾಹಿತಿ ರವಾನೆಯಾಗಲು ಕೂಡಾ ಶೂನ ಬದಿಯಲ್ಲಿ ಒಂದು ಬಟನ್ ಕೂಡಾ ಇರುತ್ತದೆ.
ಇದಕ್ಕೆ ಬ್ಯಾಟರಿಯನ್ನು ಕೂಡಾ ಬಳಸಬಹುದಾಗಿದೆ. ಈತ ಹೆಣ್ಣುಮಕ್ಕಳ ರಕ್ಷಣೆಗಾಗಿ ರಚಿಸಿರುವ ಈ ವಿಶಿಷ್ಟ ಶೂವಿನ ಉಪಯೋಗವನ್ನು ಶ್ಲಾಘಿಸಲೇಬೇಕು. ಆದಷ್ಟು ಬೇಗ ಇದು ಮಾರುಕಟ್ಟೆಗೆ ಬಂದರೆ ಹೆಣ್ಮಕ್ಕಳಿಗೆ ಅತೀ ಹೆಚ್ಚು ಸಹಕಾರಿಯಾಗಬಲ್ಲದು.