ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಶಂಕರ ನಾರಾಯಣ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಖಾಸಗಿ ಸಂಸ್ಥೆಯವರು ಸರಕಾರದ ಯೋಜನೆಯ ಟೆಂಡರ್ ಪಡೆದುಕೊಂಡಿದ್ದು ಇದಕ್ಕೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾತ್ ರಾಜ್ ಅಧಿನಿಯಮ 1993 ಪ್ರಕರಣ 66 ರಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು ಪಂಚಾಯತ್ ಗೆ ಸೂಕ್ತ ತೆರಿಗೆ ಪಾವತಿಸಿ ಅನುಮತಿ ಪಡೆಯುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ
ನೋಟೀಸು ನೀಡಲು ಕಾರಣ
ಸ್ಥಳೀಯರ ದೂರಿನ ಮೇರೆಗೆ ಈ ವಿಚಾರ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗೂ ಎಲ್ಲಾ ಸದಸ್ಯರ ಒತ್ತಾಯದ ಮೇರೆಗೆ ಹಾಗೂ ಪಂಚಾಯತ್ ಗೆ ಸಂಭಂದಿಸಿದ ತೆರಿಗೆ ಪಾವತಿಸದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಡೆಸುವಂತೆ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆಯ ನೋಟೀಸು ನೀಡಲಾಗಿದೆ ಎಂಬ ಮಾಹಿತಿ ದೊರೆತಿರುತ್ತದೆ
ಅದಲ್ಲದೆ ಇವರ ವಿರುದ್ದ ಸಾರ್ವಜನಿಕರಿಂದ ಅನೇಕ ದೂರು ಅರ್ಜಿಗಳು ಗ್ರಾಮ ಪಂಚಾಯತ್ ಗೆ ಬಂದಿದ್ದು ಇದರ ವಿರುದ್ದ ಗ್ರಾಮ ಪಂಚಾಯ್ತ ಅಧ್ಯಕ್ಷರು ದಿಟ್ಟ ನಿರ್ಧಾರ ಕೈಗೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ
ಅದಲ್ಲದೆ ನೋಟೀಸ್ ಗೆ ಸ್ಪಂದಿಸದೆ ಗ್ರಾಮ ಪಂಚಾಯತ್ ಗೆ ಅಗೌರವ ತೋರಿದ್ದಲ್ಲಿ ಅದನ್ನು ಮುಚ್ಚಿಸಬೇಕು ಎಂದು ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿರುತ್ತದೆ ಎಂಬ ಮಾಹಿತಿ ಬಂದಿರುತ್ತದೆ
ಅದಲ್ಲದೆ ಸದ್ರಿ ಲೀಸ್ ಗೆ ನೀಡಿದ ಸ್ಥಳ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತೆನೆ ಯಾಗಿರುವುದಿಲ್ಲ ಕೃಷಿ ಜಾಗವಾಗಿದ್ದು ಇದಕ್ಕೆ ವಾಣಿಜ್ಯ ಉಪಯೋಗಕ್ಕೆ ಬಳಸಲು ಲೀಸ್ ಗೆ ನೀಡಲು ಅನುಮತಿ ನೀಡಬಾರದು ಎಂಬ ವಿಚಾರ ಕೂಡ ಚರ್ಚೆಯಾಗಿದೆ ಎಂಬ ಮಾಹಿತಿ ಬಂದಿರುತ್ತದೆ