ಕನ್ಯಾಕುಮಾರಿ: ಸಮಾಜ ಮುಂದುವರೆದಂತೆ ಜನರ ಮನಸ್ಥಿತಿಯೂ ಬದಲಾಗಿಬಿಟ್ಟಿದೆ. ಅಕ್ರಮ ಸಂಬಂಧಗಳು ಕೂಡಾ ಹೆಚ್ಚಾಗಿ ಬಿಟ್ಟಿದೆ. ಮನುಷ್ಯ ಭಾವನೆಗಳಿಗೆ ಬೆಲೆ ಕೊಡುವುದೂ ಕಡಿಮೆಯಾಗಿದೆ. ಮಾನವೀಯ ಸಂಬಂಧಗಳೂ ನಶಿಸಿ ಹೋಗಿದೆ. ಹಣದಾಸೆಗಾಗಿ ಗಂಡನನ್ನೂ ಬಿಡುವ ಪತ್ನಿಯರ ಮಧ್ಯೆ ಈ ಒಂದು ಗೃಹಿಣಿ ಮಾಡಿರುವ ಘನಕಾರ್ಯ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ...!!
ಮನೆ ಮಾರಿ ಲವ್ವರ್ ಜೊತೆ ಎಸ್ಕೇಪ್ ಆದ ಮಹಿಳೆ...!!
ಮಹಿಳೆಯೊಬ್ಬಳು ಮನೆ ಸೇಲ್ ಮಾಡಿ ಬಂದ ಹಣದೊಂದಿಗೆ ಪ್ರಿಯಕರನ ಜೊತೆ ಪರಾರಿ ಆಗಿದ್ದು, ನೊಂದ ಗಂಡ ಜೀವಾಂತ್ಯಗೊಳಿಸಿದ ಆಘಾತಕಾರಿ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವಿಲ್ಲುಕುರಿ ಗ್ರಾಮದಲ್ಲಿ ನಡೆದಿದೆ. ತನ್ನ ಕುಟುಂಬದ ನಿರ್ವಹಣೆಗಾಗಿ ದೂರದ ಸೌದಿ ಅರೇಬಿಯಾದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬೆಂಜಮಿನ್ ಎಂಬಾತ ಆತ್ಮಹತ್ಯೆಗೊಳಗಾದ ವ್ಯಕ್ತಿ.
ಆತನ ಪತ್ನಿ ಸುನೀತಾ ಕನ್ಯಾಕುಮಾರಿಯಲ್ಲಿ ವಾಸವಿದ್ದಳು. ಹತ್ತೊಂಭತ್ತು ವರ್ಷಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ. ತಾನು ದುಡಿದ ಹಣವನ್ನು ಬೆಂಜಮಿನ್ ಹೆಂಡತಿಗೆ ಕಳುಹಿಸುತ್ತಿದ್ದ. ಆಕೆ ಮಾತ್ರ ತನ್ನ ಪ್ರಿಯಕರನ ಜೊತೆ ಜ್ವಾಲಿ ಮಾಡುತ್ತಿದ್ದಳು. ಗಂಡ ಹೆಂಡತಿ ನಡುವೆ ಆಗಾಗ ಮನಸ್ತಾಪಗಳು ನಡೆಯುತ್ತಿದ್ದವು. ಸುನೀತಾ ಕೆಲವು ವಾರಗಳ ಹಿಂದೆ ಮನೆ ಬಿಟ್ಟು ಹೋಗಿರುವುದರ ಬಗ್ಗೆ ಸಂಬಂಧಿಕರು ಆಕೆಯ ಗಂಡನಿಗೆ ತಿಳಿಸಿದ್ದರು.
ವೀಡಿಯೋ ಮಾಡಿಟ್ಟು ಜೀವಾಂತ್ಯಗೊಳಿಸಿದ ಗಂಡ..!!
ವೀಡಿಯೋ ಮಾಡಿಟ್ಟು ಪತಿ ಬೆಂಜಮಿನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಪಿ ಸರ್ ನಾನು ನನ್ನ ಹೆಂಡತಿಯನ್ನು ರಾಣಿಯಂತೆ ನೋಡಿಕೊಂಡೆ. ಅವಳಿಗೆ ಅನೈತಿಕ ಸಂಬಂಧವಿರೋದು ತಡವಾಗಿ ಗೊತ್ತಾಗಿದೆ. ನನ್ನ ಪತ್ನಿ ಮನೆಯನ್ನು ಮೂವತ್ತಮೂರು ಲಕ್ಷ ರೂ.ಗೆ ಮಾರಿದ್ದಾಳೆ.
ಹಣದೊಂದಿಗೆ ಆಕೆಯ ಲವ್ವರ್ ಜೊತೆ ಪರಾರಿಯಾಗಿದ್ದಾಳೆ. ಅವರನ್ನು ಮಾತ್ರ ಬಿಡ್ಬೇಡಿ. ಸೈಜು, ಸುನೀತಾ, ಶೀಲಾ ನನ್ನ ಸಾವಿಗೆ ಕಾರಣ. ಅವರಿಗೆ ಮರಣದಂಡನೆ ವಿಧಿಸಿ. ಅದನ್ನು ನಾನು ಮೇಲಿಂದ ನೋಡಿ ಖುಷಿಪಡ್ತೇನೆ ಎಂದು ವೀಡಿಯೋದಲ್ಲಿ ಹೇಳಿಟ್ಟು ಜೀವಾಂತ್ಯಗೊಳಿಸಿದ್ದಾರೆ. ಇದೀಗ ಪೊಲೀಸರು ಅವರ ಪತ್ನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.