ಬೆಂಗಳೂರು: ಎಲ್ಲಾ ದಾಂಪತ್ಯದಲ್ಲೂ ಗಂಡಸರೇ ಕ್ರೂರಿಯಾಗಿರುತ್ತಾರೆ ಅನ್ನೋದೆಲ್ಲ ಸುಳ್ಳು. ಇತ್ತೀಚಿನ ದಿನಗಳಲ್ಲಿ ಹೆಂಡತಿಯ ಕಾಟದಿಂದ ಬೇಸತ್ತು ಗಂಡಸರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಹೆಂಡತಿಯ ಕಾಟದಿಂದ ಯಾವಾಗ ತಪ್ಪಿಸಿಕೊಳ್ಳಲು ಸಮಯ ಸಿಗುತ್ತೆ ಅಂತಾನೇ ಕಾಯುತ್ತಿರುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕೂಡಾ ಹೆಂಡತಿಯ ಅನುಪಸ್ಥಿತಿಯನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ ನೋಡಿ.
ತವರುಮನೆಗೆ ಹೋದ ಪತ್ನಿ...ಫ್ರೀ ಬಿಸ್ಕೆಟ್ ನೀಡಿ ಸಂಭ್ರಮಿಸಿದ ಪತಿ..!
ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗಿರುವುದನ್ನು ಆಟೋದಲ್ಲಿ ಪ್ರಯಾಣಿಸಿದ ಎಲ್ಲಾ ಪ್ರಯಾಣಿಕರಿಗೂ ಉಚಿತವಾಗಿ ಬಿಸ್ಕೆಟ್ ಹಂಚುವ ಮೂಲಕ ಸಂಭ್ರಮಿಸಿದ ವಿಶೇಷ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದು ಸೋಷಿಯಲ್ ಮೀಡಿಯಾದಲ್ಲೆಲ್ಲ ವೈರಲ್ ಆಗುತ್ತಿದೆ. ಹೆಂಡತಿ ಇಲ್ಲದಿರುವ ಸುಂದರ ಕ್ಷಣಗಳನ್ನು ಸಂತೋಷದಿಂದ ಕಳೆಯುತ್ತಿರುವ ಈತ ತನ್ನ ಹೆಂಡತಿ ತವರು ಮನೆಗೆ ಹೋಗಿರುವ ಬಗ್ಗೆ ಆಟೋದಲ್ಲಿ ಬೋರ್ಡ್ ಒಂದನ್ನು ಬರೆದು ಹಾಕಿದ್ದಾನೆ. ಪ್ರಯಾಣಿಕರಿಗೆ ಬ್ರಿಟಾನಿಯಾ ಮಿಲ್ಕ್ ಬಿಸ್ಕೆಟ್ ಕೂಡಾ ಹಂಚಿದ್ದಾನೆ.
ಈತನ ವೈರಲ್ ಪೋಸ್ಟ್ ಗೆ ನೆಟ್ಟಿಗರ ಕಾಮೆಂಟ್ಸ್ ಏನು ಗೊತ್ತಾ...??
ಕೆಲವರು ಇದನ್ನು ಸ್ವಾತಂತ್ರ್ಯ ಎಂದು ವಿಡಂಬಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ. ಇನ್ನೂ ಕೆಲವರು ತಮಾಷೆಯಲ್ಲಿ ನೀವು ಅವನ ಜೀವನವನ್ನೇ ಹಾಳು ಮಾಡಿದ್ದೀರಿ. ಒಂಟಿಯಾಗಿ ಹ್ಯಾಪಿಯಲ್ಲಿದ್ದ. ಇದೀಗ ನಿಮ್ಮ ಸಂಸಾರದ ಗುಟ್ಟು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವಂತೆ ಆಗಿದೆ ಎಂದಿದ್ದಾರೆ. ಇನ್ನೊಬ್ಬ ನೆಟ್ಟಿಗ ಈ ವಿಷ್ಯ ಹೆಂಡ್ತಿಗೆ ಗೊತ್ತಾದರೆ ನೀನು ಪರ್ಮನೆಂಟಾಗಿ ರಿಕ್ಷಾದಲ್ಲಿಯೇ ಮಲಗಬೇಕಾಗುತ್ತದೆ' ಎಂದು ಕಾಮೆಂಟ್ ಮಾಡಿದ್ದಾನೆ.