ಬೆಳ್ತಂಗಡಿ: ಕರಾವಳಿಯ ಜನ ದೈವ ದೇವರುಗಳನ್ನು ಹೇಗೆ ಶ್ರದ್ಧಾಭಕ್ತಿಯಿಂದ ನಂಬುತ್ತಾರೋ ಹಾಗೇ ಪ್ರೇತಗಳ ಇರುವಿಕೆಯ ಮೇಲೆ ಕೂಡಾ ನಂಬಿಕೆ ಇಟ್ಟಿದ್ದಾರೆ. ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ಬ್ರಹ್ಮರಾಕ್ಷಸನ ಉಚ್ಛಾಟನೆ ಕಾರ್ಯ ನಡೆಯಿತು. ಇದಾದ ಬಳಿಕ ಬ್ರಹ್ಮ ರಾಕ್ಷಸನ ಕಾಟ, ಪ್ರೇತ ಬಾಧೆ ಸನ್ನಿವೇಶಗಳು ಕರಾವಳಿಯಲ್ಲಿ ತೋರಿ ಬರುತ್ತಲೇ ಇದೆ. ಇದೀಗ ಬೆಳ್ತಂಗಡಿ ತಾಲ್ಲೂಕಿನಲ್ಲಿ ಕುಟುಂಬವೊಂದರ ಮನೆಯಲ್ಲಿ ನಡೆದಿರುವ ಅಚ್ಚರಿಕರ ಘಟನೆ ದಿಗಿಲು ಹುಟ್ಟಿಸಿದೆ.
ಮನೆಯಲ್ಲಿ ಕತ್ತಲಾದ್ರೆ ಸಾಕು ಪ್ರೇತದ ಕಾಟ..!! ಅನುಭವಿಸಿ ಸಾಕಾಯ್ತು ಎನ್ನುತ್ತಿದೆ ಕುಟುಂಬ..!!
ನಮಗೆ ಯಾರೋ ಮಾಟ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಪ್ರೇತವಿದೆ. ಅದರಿಂದ ಅನೇಕ ರೀತಿಯ ತೊಂದರೆ ಆಗುತ್ತಿದೆ. ಮನೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಹೊತ್ತು ಮಲಗಲು ಬಿಡುತ್ತಿಲ್ಲ ಎಂದು ಅನುಭವವನ್ನು ಹಂಚಿಕೊಳ್ಳುತ್ತಿರುವ ಕುಟುಂಬದ ಪರಿಸ್ಥಿತಿ ಇಂದು ಕರಾವಳಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿಯಲ್ಲಿ ಈ ಘಟನೆ ನಡೆಯುತ್ತಿದೆ.
ಇಲ್ಲಿ ವಾಸ್ತವ್ಯವಿರುವ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಪ್ರೇತಬಾಧೆ ಕಾಡುತ್ತಿದ್ದು ಸಾಕಷ್ಟು ರೀತಿಯ ಸಮಸ್ಯೆಯನ್ನು ಅವರು ಎದುರಿಸುತ್ತಿದ್ದಾರಂತೆ. ವಿಷಯ ಕೇಳಿದ ಗ್ರಾಮಸ್ಥರು ಇದೀಗ ಪ್ರತಿದಿನ ಉಮೇಶ್ ಶೆಟ್ಟಿ ಅವರ ಮನೆಗೆ ರಾತ್ರಿ ಹೊತ್ತು ತೆರಳುತ್ತಿದ್ದಾರೆ. ಇದರಿಂದ ಪಕ್ಕದ ಮನೆಯವರಿಗೂ ಕಿರಿಕಿರಿ ಆಗುತ್ತಿದೆ ಅಂತೆ...
ಈ ಬಗ್ಗೆ ಉಮೇಶ್ ಶೆಟ್ಟಿ ಕುಟುಂಬ ಹೇಳೋದೇನು..?
ನಮ್ಮ ಮನೆಯಲ್ಲಿ ಮೂರು ತಿಂಗಳಿನಿಂದ ಪ್ರೇತ ಬಾಧೆಯಿದೆ. ಬಟ್ಟೆಗಳನ್ನು ಸುಟ್ಟು ಹಾಕೋದು, ಪಾತ್ರೆಗಳನ್ನೆಲ್ಲ ಬಿಸಾಕಿ ಓಡಿ ಹೋಗುವ ಅನುಭವ ಆಗ್ತಿದೆ. ಮಲಗಿದರೆ ಕುತ್ತಿಗೆ ಹಿಸುಕಿದಂತಾಗುತ್ತದೆ. ನಾವು ಪ್ರೇತ ನೋಡಿದ್ದೇವೆ. ಅದಕ್ಕೆ ಉದ್ದನೆಯ ಕೂದಲು ಇದೆ. ಯಾರೋ ನಮಗೆ ಭಸ್ಮ ಹಾಕಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ ವಿಮರ್ಶೆ ಮಾಡಿ ಇದರ ಸತ್ಯಾಸತ್ಯತೆ ಏನು..? ಇದು ನಿಜವಾಗಿಯೂ ಪ್ರೇತಬಾಧೆನಾ ಅಥವಾ ಮನುಷ್ಯ ರೂಪದ ಪ್ರೇತಗಳ ಕಾಟವೋ ಎಂದು ತಿಳಿದುನೋಡಬೇಕಷ್ಟೆ.