ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಕೇಸ್..!! ಪ್ರಕರಣದಿಂದ ಮುಕ್ತರಾದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ...!!

  • 08 Feb 2025 12:39:33 PM

ಧಾರವಾಡ: ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪರಸ್ಪರ ಪಕ್ಷಗಳ ನಡುವೆ ಕಿತ್ತಾಟ, ಆರೋಪಗಳು, ವ್ಯಂಗ್ಯ ಹೇಳಿಕೆ ಮಾಮೂಲಿ. ಇಲ್ಲಸಲ್ಲದ ಆರೋಪಗಳಿಂದ ಸ್ಥಾನದಿಂದ ಕೆಳಗಿಳಿಸುವುದೇ ರಾಜಕೀಯದ ಗಿಮಿಕ್. ಇದಕ್ಕೆ ಅನೇಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದ ಬಿಜೆಪಿ ಪಕ್ಷದ ಹಿರಿಯ ಪ್ರಬುದ್ಧ ರಾಜಕಾರಣಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಕೂಡಾ ಹೊರತಾಗಿಲ್ಲ. ಇದೀಗ ಇವರು ಆರೋಪಗಳಿಂದ ಮುಕ್ತರಾಗಿದ್ದು ಕೋರ್ಟ್ ಬಿಗ್ ರಿಲೀಫ್ ನೀಡಿದೆ.

 

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು...!!

 

ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇವರಿಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದ್ದು ಇವರು ಬಂಧನದ ಭೀತಿಯಿಂದ ಬಚಾವಾಗಿದ್ದಾರೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದಿದ್ದು ಇಂದಿಗೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.

 

ಮಾಜಿ ಸಿಎಂಗೆ ಇದೀಗ ತಾತ್ಕಾಲಿಕ ರಿಲೀಫ್..!

 

ಧಾರವಾಡ ಹೈಕೋರ್ಟ್ ಪೀಠ ಪ್ರಕರಣ ರದ್ದು ಮಾಡುವ ಬದಲು ಜಾಮೀನು ನೀಡಿ ತಾತ್ಕಾಲಿಕ ರಿಲೀಫ್ ನೀಡಿದೆ. ಯಡಿಯೂರಪ್ಪ ವಿರುದ್ಧ ಕಳೆದ ವರ್ಷ ಫೊಕ್ಸೋ ಪ್ರಕರಣದಡಿ ದೂರು ನೀಡಲಾಗಿತ್ತು. ಇದರ ಆಧಾರದಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು. ಸಿಐಡಿ ಅಧಿಕಾರಿಗಳು ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದರು.