ದೆಹಲಿ: ದೇಶದಲ್ಲಿ ಮತದಾನ ಪ್ರಕ್ರಿಯೆ ಅನೇಕ ಹಂತದಲ್ಲಿ ನಡೆಯುತ್ತಿರುತ್ತದೆ. ಎರಡು ಪಕ್ಷಗಳ ಮಧ್ಯೆ ಕೋಲ್ಡ್ ವಾರ್ ಗಳು ನಡೆಯೋದು ಕೂಡಾ ಸಹಜ. ಇದೀಗ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಆರಂಭಗೊಂಡಿದ್ದು ಮೊದಲ ಹಂತದಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ.
ನಲ್ವತ್ತೇಳು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ...
ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾದ ಕಾಂಗ್ರಸ್ ಗೆ ಈ ಚುನಾವಣೆ ಅಗ್ನಿಪರೀಕ್ಷೆ ಆಗಿದ್ದು ಅತ್ಯಂತ ಮಹತ್ವದ್ದಾಗಿದೆ. ಕಳೆದ ಎರಡು ಚುನಾವಣೆಗಳಲ್ಲಿ ಬಹುಮತ ಸಾಧಿಸಿ ಅಧಿಕಾರ ನಡೆಸಿರುವ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯೇರುವ ಅಂದಾಜಿನಲ್ಲಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಮತ್ತೆ ಅಧಿಕಾರದ ಆಸೆಯಲ್ಲಿ ಅಗ್ನಿ ಪರೀಕ್ಷೆಗೆ ಇಳಿದಿದೆ. ಎಲ್ಲಾ ಪ್ರಶ್ನೆ, ಕುತೂಹಲಗಳಿಗೆ ಆದಷ್ಟು ಶೀಘ್ರವಾಗಿ ಉತ್ತರ ಸಿಗಲಿದೆ.
ಇನ್ನೂ ಖಾತೆ ತೆರೆಯದ ಕಾಂಗ್ರೆಸ್ ಗೆ ಎದುರಾಗಿದೆ ಆತಂಕ..!!
ಸತತ ಹತ್ತು ವರ್ಷಗಳ ಆಡಳಿತದಿಂದ ಅಧಿಕಾರ ವಿರೋಧಿ ಅಲೆ ಆರಂಭವಾಗಿದ್ದು ಈಗಾಗಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜೈಲುವಾಸ ಅನುಭವಿಸಿ ಬಂದಿರೋದು ಆಪ್ ಗೆ ಹಿನ್ನೆಡೆ ತರುತ್ತಾ..? ದುಷ್ಪರಿಣಾಮ ಬೀರುತ್ತಾ ನೋಡಬೇಕು. ಕಳೆದ ಚುನಾವಣೆಯಲ್ಲಿ ಶೂನ್ಯ ಫಲಿತಾಂಶ ಪಡೆದಂತೆ ಈ ಬಾರಿಯೂ ಕಾಂಗ್ರೆಸ್ ಖಾತೆ ತೆರೆದಿಲ್ಲ. ಇಂದಿನ ಚುನಾವಣಾ ಫಲಿತಾಂಶದಿಂದ ಎಲ್ಲಾ ಪಕ್ಷದ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.