ಪ್ರಧಾನಿ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ಅಭಿವೃದ್ಧಿಯ ನವ ಅಧ್ಯಾಯ ಆರಂಭ: ಸಂಸದ ಕ್ಯಾ. ಚೌಟ

  • 09 Feb 2025 04:07:16 PM

ಮಂಗಳೂರು: ದೆಹಲಿಯಲ್ಲಿ ಬಿಜೆಪಿಯ ಭರ್ಜರಿ ಗೆಲುವು, ರಾಷ್ಟ್ರ ರಾಜಧಾನಿ ದೆಹಲಿಯ ಉಜ್ವಲ, ಪ್ರಗತಿಪರ ಭವಿಷ್ಯಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ-ವಿಕಸಿತ ದೆಹಲಿ' ದೃಷ್ಟಿಕೋನದ ಮೇಲೆ ಜನತೆಯ ವಿಶ್ವಾಸವೂ ಪ್ರತಿಬಿಂಬಿಸುತ್ತಿದೆ" ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೇಳಿದ್ದಾರೆ. 

 

ಇಂದು ಬೆಳ್ತಂಗಡಿ ಬಿಜೆಪಿ ಕಚೇರಿಯ ಹತ್ತಿರ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಸಮಯದಲ್ಲಿ ಮಾತನಾಡಿದ ಸಂಸದರು , ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ಮೂಲಕ ಕಟ್ಟಿದ್ದ 'ಶೀಶ್ ಮಹಲ್' ಅನ್ನು ನುಚ್ಚುನೂರು ಮಾಡುವ ಮೂಲಕ ದೆಹಲಿ ಜನತೆ 'ಆಪ್' ಮುಕ್ತ ಮಾಡಿರುವುದಲ್ಲದೇ, ದೆಹಲಿಯಲ್ಲಿ ಅಭಿವೃದ್ಧಿ ಮತ್ತು ವಿಶ್ವಾಸದ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಿದ್ದಾರೆ" ಎಂದು ಹೇಳಿದ್ದಾರೆ.

 

ಈ ಗೆಲುವಿನ ಪ್ರಮುಖ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಜನರಿಗಿರುವ ನಂಬಿಕೆ ಮತ್ತು ಭರವಸೆಯಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದೆಂದು ಹೇಳಿ ಜನರಿಗೆ ಮಂಕುಬೂದಿ ಎರಚಿದ್ದ ಕೇಜ್ರಿವಾಲ್ ಮುಂದಾಳತ್ವದ ಪಕ್ಷವನ್ನು ಅಲ್ಲಿನ ಜನರೇ ಪೂರ್ತಿಯಾಗಿ ಪೊರಕೆಯಿಂದ ಸ್ವಚ್ಚಗೊಳಿಸಿದ್ದಾರೆ. 

 

ಹರಿನಗರ, ಕಸ್ತೂರ್ಬಾ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ವಾರ ನಾನು ಕೂಡಾ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೆ ಆ ವೇಳೆಯಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಯಾಗಿತ್ತು ಅದು ಇದು ಇಂದಿನ ದಿನದ ಫಲಿತಾಂಶದಲ್ಲ ಸ್ಪಷ್ಟವಾಗಿದೆ " ಎಂದು ಹೇಳಿದ್ದಾರೆ.

 

ದೇಶದ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ರಾಜಧಾನಿಯಲ್ಲಿ ಬಿಜೆಪಿಗೆ ಜನಾದೇಶ ನೀಡಿರುವುದು ಗಮನಾರ್ಹವಾಗಿದೆ. ಯಾಕೆಂದರೆ ಮತದಾರರು ರಾಷ್ಟ್ರ ರಾಜಧಾನಿಯಲ್ಲಿಯೇ ಪ್ರಧಾನಿ ಮೋದಿಯವರ ಕೈಯನ್ನು ಬಲಪಡಿಸಿರುವುದು ಅಭಿವೃದ್ದಿ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಇದು ವರದಾನವಾಗಿ ಮಾರ್ಪಡಲಿದೆ.

 

ಸತತ 27 ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದ್ದ ರಾಷ್ಟ್ರ ರಾಜಧಾನಿಯನ್ನು 'ಡಬಲ್ ಎಂಜಿನ್' ಬಿಜೆಪಿ ಸರ್ಕಾರವು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆ ಕೊಂಡೊಯ್ಯುಲಿದೆ ಎಂದೂ ಸುದೀರ್ಘ ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿರುವಂತಹ ಪ್ರತಿಯೊಬ್ಬ ಪಾರ್ಟಿಯ ನಾಯಕರು ಹಾಗೂ ಕಾರ್ಯಕರ್ತರಿಗೆ ಸಂಸದನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.