ಕಾರವಾರ: ಮೀನುಗಾರನ ಬಲೆಗೆ ಸಿಕ್ಕಿದ್ದ ದಾಖಲೆಯ ಅತಿ ದೊಡ್ಡ ಬಂಗುಡೆ; ಸಿಎಂಎಫ್‌ಆರ್‌ಐ ದೃಢೀಕರಣ!

  • 09 Feb 2025 04:27:05 PM

ಕಾರವಾರ: ಒಂದೂವರೆ ವರ್ಷಗಳ ಹಿಂದೆ ಮೀನುಗಾರರ ಬಲೆಗೆ ಸಿಕ್ಕಿದ್ದ ಬಂಗುಡೆ ಮೀನು (ಇಂಡಿಯನ್ ಮಾಕ್ರೆಲ್) ಅಚ್ಚರಿಯಾಗುವಂತಹದ್ದಾಗಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡ ಬಂಗುಡೆ ಎಂದು ಈಗ ದೃಢಪಟ್ಟಿದೆ.

 

ಬೈತಖೋಲದ ಆನಂದ ಹರಿಕಂತ್ರ ಅವರ ಬಲೆಗೆ ಸಿಕ್ಕಿದ ಈ ಮೀನು ಹೆಣ್ಣು ಬಂಗುಡೆಯೆಂದೂ ಇದು 48 ಸೆಂ.ಮೀ ಉದ್ದ ಮತ್ತು 1.230 ಕೆ.ಜಿ ತೂಕ ಹೊಂದಿದೆ ಎಂದು ಪ್ರಸ್ತುತ ಇದನ್ನು ಕಾರವಾರದಲ್ಲಿ ಸಂರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

 

ಕಾರವಾರದ ಸಾಗರ ಅಧ್ಯಯನ ಕೇಂದ್ರದ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಲ್ಲಿ ಈ ಮೀನು ಇತಿಹಾಸದಲ್ಲಿಯೇ ಅತಿ ದೊಡ್ಡ ಬಂಗುಡೆ ಎಂದು ಖಚಿತಪಡಿಸಿದೆ. ಕೇಂದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ಕೂಡ ಇದರ ಕುರಿತು ಅಧಿಕೃತ ದೃಢೀಕರಣವನ್ನು ನೀಡಿದೆ.