ನಿರುದ್ಯೋಗಿಗಳಿಗೆ ಬಂಪರ್ ಅವಕಾಶ...!! ಪೋಸ್ಟ್ ಆಫೀಸ್ ನಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ...!! ಹತ್ತನೇ ಕ್ಲಾಸ್ ಪಾಸಾಗಿದ್ರೆ ಸಾಕು...!!

  • 11 Feb 2025 03:54:36 PM

ಶಿಕ್ಷಣ ಪಡೆದಿದ್ದರೂ, ಕೆಲಸ ಮಾಡುವ ಉತ್ಸಾಹ ಇದ್ದರೂ ನಾವು ಅಂದುಕೊಂಡಂತೆ ಅಥವಾ ನಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಕೆಲಸ ಸಿಗೋದು ತುಂಬಾ ಕಷ್ಟ. ಇದೀಗ ಅಂಚೆ ಇಲಾಖೆ ನಿರುದ್ಯೋಗಿಗಳಿಗೆ ಶುಭಸುದ್ದಿಯೊಂದನ್ನು ನೀಡಿದೆ.

 

ಪೋಸ್ಟ್ ಆಫೀಸ್ ನಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ..!

 

ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರತೀಯ ಅಂಚೆ ಇಲಾಖೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಒಂದು ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

 

ಪೋಸ್ಟ್ ಆಫೀಸ್ ಗ್ರೂಪ್ ಸಿ ಹುದ್ದೆಗಳ ನೇಮಕಾತಿ 2025 ರ ಪ್ರಕಾರ ಸುಮಾರು 25 ಚಾಲಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಬಿಡುಗಡೆ ಮಾಡಲಾಗಿರುವ ಅಧಿಸೂಚನೆ ಪ್ರಕಾರ ಕೆಲಸ ಮಾಡುವ ಉತ್ಸಾಹದ ಜೊತೆಗೆ ಅಭ್ಯರ್ಥಿಗಳು ಎಸ್ಎಸ್ಎಲ್ ಸಿಯನ್ನು ಕಡ್ಡಾಯವಾಗಿ ಪಾಸ್ ಮಾಡಿರಬೇಕು. 

 

ಹುದ್ದೆಯ ನೇಮಕಾತಿ ವಿವರ ಹೀಗಿದೆ...!!

 

ನೇಮಕಾತಿ ಇಲಾಖೆ ಪೋಸ್ಟ್ ಆಫೀಸ್ ಆಗಿದ್ದು ಈಗಾಗಲೇ ಖಾಲಿ ಹುದ್ದೆಗಳ ಸಂಖ್ಯೆ 25 ಇದೆ.

ಪೋಸ್ಟ್ ಆಫೀಸ್ ಗ್ರೂಪ್ ಸಿ ಹುದ್ದೆ ಇದಾಗಿದ್ದು ಇದರಲ್ಲಿ ಸ್ಟಾಪ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇದೆ‌. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಇದರ ಜೊತೆಗೆ ಲಘು ಹಾಗೂ ಬಾರೀ ಮೋಟಾರು ವಾಹನಗಳು ಎರಡಕ್ಕೂ ಮಾನ್ಯತೆ ಹೊಂದಿರುವ ಚಾಲನ ಪರವಾನಗಿ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

 

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿ 56 ವರ್ಷಗಳವರೆಗೆ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳನ್ನು ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ ಡ್ರೈವಿಂಗ್ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ಮತ್ತು ಇತರ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಶುಲ್ಕ ಇರುವುದಿಲ್ಲ. ಉಚಿತವಾಗಿ ಅಪ್ಲೈ ಮಾಡಬಹುದು. 

 

ಅರ್ಜಿ ಸಲ್ಲಿಸುವುದು ಹೇಗೆ..?

 

ಅರ್ಜಿ ಸಲ್ಲಿಸಲು ಮೊದಲು ಪೋಸ್ಟ್ ಆಫೀಸ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯ ಇರುವಂತ ಎಲ್ಲಾ ದಾಖಲಾತಿಗಳನ್ನು ಲಗತ್ತಿಸಿ ಹಿರಿಯ ವ್ಯವಸ್ಥಾಪಕರು,

ಮೇಲ್ ಮೋಟಾರ್ ಸೇವೆ, ಸಂಖ್ಯೆ 37, ಗ್ರೀಮ್ಸ್ ರಸ್ತೆ,

ಚೆನ್ನೈ – 600006

 

ಈ ಮೇಲಿನ ವಿಳಾಸಕ್ಕೆ ನೀವು ಪೋಸ್ಟ್ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ https://t.me/Karnatakapublic/ ಈ ಅಧಿಕೃತ ವೆಬ್‌ಸೈಟ್‌ನ್ನು ಚೆಕ್ ಮಾಡಬಹುದು.