ಸಹೋದರಿಯ ಮದ್ವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ನಡೆಯಿತು ದುರಂತ...!! ಹಾರ್ಟ್ ಅಟ್ಯಾಕ್ ಆಗಿ ಯುವತಿ ಸ್ಪಾಟ್ ಡೆತ್...!!

  • 12 Feb 2025 12:21:31 PM

ಮಧ್ಯಪ್ರದೇಶ: ಮನುಷ್ಯನಿಗೆ ಸಾವು ಅನ್ನೋದು ಹೇಗೆ ಬರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ನಮ್ಮ ಜೊತೆ ಕೊನೆ ಕ್ಷಣದವರೆಗೂ ಆರಾಮವಾಗಿ ಮಾತನಾಡುತ್ತಿದ್ದ ವ್ಯಕ್ತಿ ದಿಢೀರ್ ಇಲ್ಲ ಅಂತಾದಾಗ ಹೇಗಾಗುತ್ತೆ ಹೇಳಿ. ಸಂಭ್ರಮದಿಂದ ಕಳೆಯುವ ಕ್ಷಣಕ್ಕೆ ಸಂತೋಷದಿಂದ ಸಾಕ್ಷಿಯಾಗಬೇಕಾದವರು ಸೂತಕದ ಛಾಯೆಯಲ್ಲಿ ಮಿಂದೆದ್ದರೆ ಅದಕ್ಕಿಂತ ದೊಡ್ಡ ದೌರ್ಭಾಗ್ಯ ಇನ್ನೊಂದು ಇದೆಯೇ. ಅಂತಹುದೇ ಮನಕಲಕುವ ಘಟನೆಯೊಂದು ನಡೆದಿದೆ.

 

ಡ್ಯಾನ್ಸ್ ಮಾಡುತ್ತಿದ್ದಾಗಲೇ ಯುವತಿಗೆ ಹಾರ್ಟ್ ಅಟ್ಯಾಕ್..!!

 

ಸಹೋದರಿಯ ಮ್ಯಾರೇಜ್ ಫಂಕ್ಷನ್ ನಲ್ಲಿ ಅತ್ಯಂತ ಖುಷಿಯಾಗಿ ಡ್ಯಾನ್ಸ್ ಮಾಡುತ್ತಾ ಮನರಂಜಿಸುತ್ತಿದ್ದ ಯುವತಿಯೋರ್ವಳು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ವಿದಿಶಾ ನಗರದಲ್ಲಿ ನಡೆದಿದೆ. ಇಂದೋರ್ ನಿವಾಸಿ ಇಪ್ಪತ್ತಮೂರು ವರ್ಷದ ಪರಿಣಿತಾ ಜೈನ್ ಮೃತ ದುರ್ದೈವಿ. ತನ್ನ ಸೋದರ ಸಂಬಂಧಿ ಆಗಿದ್ದ ಸಹೋದರಿಯ ಮದುವೆಯ ಸಮಾರಂಭದಲ್ಲಿ ಈಕೆ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡಿದ್ದಾಳೆ. 

 

ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ದಿಢೀರ್ ಹೃದಯಾಘಾತ...!!!

 

ಸಣ್ಣ ವಯಸ್ಸಿನ ಯುವತಿಯಾಗಿದ್ದ ಪರಿಣಿತಾ ಜೈನ್ ಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿರಲಿಲ್ಲ. ಆರಾಮವಾಗಿದ್ದಳಂತೆ. ಆದರೆ ನೃತ್ಯ ಮಾಡುವಾಗ ಬಿದ್ದ ಈಕೆಯನ್ನು ನೋಡಿ ಮನೆಯವರಿಗೆ ಗಾಬರಿಯಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ದುರಾದೃಷ್ಟವಶಾತ್ ಈಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಇದೀಗ ಸಿಡಿಲು ಬಡಿದ ಆಘಾತವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.