ಉಡುಪಿ|ಅಕ್ರಮವಾಗಿ ಕೋಣ ಸಾಗಾಟ ಮಾಡುತ್ತಿದ್ದ ದುರುಳರು..!! ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ವಾಹನ..!

  • 12 Feb 2025 12:23:14 PM

ಉಡುಪಿ : ಅಕ್ರಮ ಗೋಸಾಗಾಟದಂತಹ ದುಷ್ಕೃತ್ಯಗಳನ್ನು ಮಟ್ಟ ಹಾಕಲು ಹಿಂದೂ ಸಂಘಟನೆಗಳು ನಿರಂತರವಾಗಿ ಅದೆಷ್ಟೇ ಹೋರಾಟ ಮಾಡುತ್ತಿದ್ದರೂ ಕೂಡಾ ದುಷ್ಕರ್ಮಿಗಳು ಅವರ ಕೃತ್ಯವನ್ನು ಮುಂದುವರೆಸುತ್ತಲೇ ಇದ್ದಾರೆ. ಕಸಾಯಿಖಾನೆಗೆ ದಬ್ಬಲು ಗೋವುಗಳನ್ನು ಹಿಂಸಿಸಿ ವ್ಯಾಘ್ರದಂತೆ ಅಬ್ಬರಿಸುವ ಇವುಗಳಿಗೆ ಮಾನವೀಯತೆಯ ನರವಂತೂ ಸತ್ತು ಹೋಗಿದೆ. ಇದೀಗ ಅಂತದೇ ರೀತಿಯಲ್ಲಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ.

 

ಅಕ್ರಮ ಕೋಣ ಸಾಗಾಟ ಮಾಡುತ್ತಿದ್ದ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ...!

 

ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ಪಿಕ್ ಅಪ್ ವಾಹನವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಿನ್ನೆ ರಾತ್ರಿ ಉಡುಪಿ ನಗರದ ಅಂಬಾಗಿಲಿನಲ್ಲಿ ಸಂಭವಿಸಿದೆ. ಪಿಕ್ ಅಪ್‌ ವಾಹನದಲ್ಲಿ ಬೆಳಗಾವಿಯಿಂದ ಮಂಜೇಶ್ವರಕ್ಕೆ ಅಕ್ರಮವಾಗಿ ಕೋಣ ಸಾಗಾಟ ಮಾಡಲಾಗುತ್ತಿದ್ದರು ಎನ್ನಲಾಗಿದೆ. ಅಪಘಾತಗೊಂಡ ವಾಹನವನ್ನು ಪರಿಶೀಲಿಸಿದಾಗ ಹಿಂಸಾತ್ಮಕವಾಗಿ, ಕೋಣಗಳಿಗೆ ನೋವಾಗುವಂತೆ ಕಟ್ಟಿಹಾಕಿದ್ದ 7 ಕೋಣಗಳು ಪತ್ತೆಯಾಗಿವೆ. ಇದನ್ನು ನೋಡಿ ಅಲ್ಲಿದ್ದ ಸ್ಥಳೀಯರು ಶಾಕ್ ಆಗಿದ್ದಾರೆ.

 

ಇಬ್ಬರ ಪೈಕಿ ಒಬ್ಬ ಎಸ್ಕೇಪ್, ಪ್ರಕರಣ ದಾಖಲು..!!

 

ಪಿಕ್ ಅಪ್‌ನಲ್ಲಿ ಇದ್ದ ಇಬ್ಬರ ಪೈಕಿ ಓರ್ವ ಎಸ್ಕೇಪ್ ಆಗಿದ್ದು ಮತ್ತೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ನಡೆಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಪರಾರಿಯಾದ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಯ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶವನ್ನು ವ್ಯಕ್ತ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.