ಬೆಳ್ತಂಗಡಿ|ಹುಲಿಕಲ್ ನಟರಾಜ್ ಗೆ ಹೆದರಿ ಪರಾರಿಯಾದ ಮಾಲಾಡಿಯ ಪ್ರೇತ!;ಅಸಲಿ ಕತೆ ಏನ್ ಗೊತ್ತಾ?

  • 12 Feb 2025 12:25:35 PM


ಬೆಳ್ತಂಗಡಿ : ಇತ್ತೀಚಿನ ದಿನಗಳಲ್ಲಿ ದ.ಕ ಜಿಲ್ಲೆಯ ಕೆಲವು ಕಡೆ ಪ್ರೇತ ಬಾಧೆ, ಬ್ರಹ್ಮರಾಕ್ಷಸನಂತಹ ದುಷ್ಟ ಶಕ್ತಿಗಳು ತಾಂಡವವಾಡುತ್ತಿರೋದು ಕೆಲವರ ಅನುಭವಕ್ಕೆ ಬಂದಿದೆ. ಅದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬ ವಿಮರ್ಶೆಯ ಗೋಜಿಗೆ ಯಾರೂ ಇಳಿದಿಲ್ಲ. ಇದೀಗ ಕಳೆದ ಕೆಲವು ದಿನಗಳಿಂದ ವಿಚಿತ್ರವಾದ ಪ್ರೇತ ಬಾಧೆಯಿಂದ ಬಳಲುತ್ತಿದ್ದ ಕುಟುಂಬಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆಯಂತೆ...

 

ಹುಲಿಕಲ್ ನಟರಾಜ್ ಬರ್ತಾರೆ ಎಂದಾಕ್ಷಣ ಪ್ರೇತ ಮಾಯ...!

 

ಕೊಲೊದಬೈಲು ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಇದೀಗ ಎಲ್ಲಾ ಸಮಸ್ಯೆಗಳು ಪರಿಹಾರವಾಗಿದೆ ಎಂದು ಹೇಳಿಕೊಂಡಿದ್ದಾರೆ. ಮನೆಯಲ್ಲಿ ಏಕಾಏಕಿ ಪಾತ್ರೆಗಳು ಬೀಳುತ್ತಿವೆ, ಬಟ್ಟೆ ಸುಡುತ್ತಿದೆ, ಗಂಟಲು ಹಿಸುಕಿದ ಅನುಭವವಾಗುತ್ತದೆ ಎಂದು ಸ್ವತಃ ಮನೆಯವರೇ ಅಭಿಪ್ರಾಯವನ್ನು ಮಾಧ್ಯಮದಲ್ಲಿ ಹಂಚಿಕೊಂಡು ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹುಲಿಕಲ್ ನಟರಾಜ್ ಅವರು ಭೇಟಿ ಕೊಡಲಿದ್ದಾರೆ ಎಂಬುವುದು ಗೊತ್ತಾದಾಗ ಪ್ರೇತ ಭಯಭೀತಗೊಂಡು ಒಡಿ ಹೋಗಿದೆಯಂತೆ. ಮೂರು ತಿಂಗಳಿನಿಂದ ಕಾಡುತ್ತಿದ್ದ ಸಮಸ್ಯೆ ಹಾಗಾದ್ರೆ ಈಗ ದಿಢೀರ್ ಪರಿಹಾರವಾಗಲು ಕಾರಣವೇನು..? ಹಾಗಾದರೆ ಮನೆಯವರೇ ಇದನ್ನು ಬೇಕಂತಲೇ ಪ್ರೇತ ಬಾಧೆಯೆಂದು ಸುಳ್ಳು ಹೇಳಿದ್ದಾರಾ..? ಎನ್ನುವಂತಹ ಪ್ರಶ್ನೆಗಳು ಕಾಡುತ್ತಿದೆ. 

 

ಈ ಬಗ್ಗೆ ಹುಲಿಕಲ್ ನಟರಾಜ್ ಅವರು ಏನ್ ಹೇಳ್ತಾರೆ ಗೊತ್ತಾ..?

 

ಸತ್ಯಾನ್ವೇಷಣೆಯಲ್ಲಿಯೇ ಖ್ಯಾತಿ ಹೊಂದಿರುವ ಹುಲಿಕಲ್ ನಟರಾಜ್ ಅವರು ಇದು ಮನಸ್ಥಿತಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಈ ರೀತಿ ವರ್ತಿಸುವ ಸಾಧ್ಯತೆಗಳಿರುತ್ತದೆ. ಮತ್ತು ನಿಜವಾದ ಪ್ರೇತ ಬಾಧೆಯಾಗಿದ್ದಲ್ಲಿ ಅದಕ್ಕೆ ತನ್ನದೇ ಆದ ಕ್ರಮಗಳಿರುತ್ತದೆ. ಅದು ಸಿನಿಮಾದ ರೀತಿಯಲ್ಲಿ ವಿಡಂಬಿಸಲೂ ಅಸಾಧ್ಯ ಎಂದಿದ್ದಾರೆ.