ಮಹರಾಷ್ಟ್ರ : ವರನಿಗೆ ಸಿಬಿಲ್ ಸ್ಕೋರ್ ಇಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧುವಿನ ಕುಟುಂಬ!;ಮುಂದೆನಾಯ್ತು ಗೊತ್ತಾ?ಹಿಂದಿನ ಕಾಲದಲ್ಲಿ ಗಂಡು ಹೆಣ್ಣಿನ ಮನೆಯವರಿಗೆ ಒಪ್ಪಿಗೆ ಆದರೆ ಸಾಕು ಮದುವೆ ಸಂಪ್ರದಾಯಗಳು ಸುಸಂಘಟಿತವಾಗಿ ನಡೆದು ಹೋಗುತ್ತಿತ್ತು.
ಯಾವುದೇ ಸಮಸ್ಯೆಯಿಲ್ಲದೆ ದಾಂಪತ್ಯವೂ ಚೆನ್ನಾಗಿ ಸಾಗುತ್ತಿತ್ತು. ಕಾಲ ಬದಲಾಯ್ತು ನೋಡಿ...ಈಗ ಮದ್ವೆಯಾಗುವ ಹುಡುಗನ ಹಣ, ಅಂತಸ್ತು ನೋಡಿ ವಿವಾಹವನ್ನು ನಿರ್ಧರಿಸುತ್ತಾರೆ. ಇಲ್ಲಿ ಕೂಡಾ ಅಂತಹುದೇ ವಿಚಿತ್ರ ಘಟನೆಯೊಂದು ನಡೆದಿದೆ.
ವರನ ಸಿಬಿಲ್ ಸ್ಕೋರ್ ಕಡಿಮೆ ಇದೆಯೆಂದು ಮದ್ವೆ ಕ್ಯಾನ್ಸಲ್...!!
ವರನಿಗೆ ಸಿಬಿಲ್ ಸ್ಕೋರ್ ಕಡಿಮೆಯಿದೆ ಎನ್ನುವ ಕಾರಣಕ್ಕೆ ವಿವಾಹ ಕಾರ್ಯಕ್ರಮವನ್ನೇ ರದ್ದುಗೊಳಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಮುರ್ತಿಝಾಪುರ್ ನಲ್ಲಿ ನಡೆದಿದೆ. ಮದುವೆ ಸಿದ್ಧತೆ ಇನ್ನೇನು ಕೊನೇ ಹಂತದಲ್ಲಿ ವಧು ಮತ್ತು ವರನ ಕುಟುಂಬಗಳ ನಡುವೆ ಪರಸ್ಪರ ಔಪಚಾರಿಕವಾಗಿ ಭೇಟಿ ಮಾಡಿದಾಗ ವಧುವಿನ ಚಿಕ್ಕಪ್ಪ ವರನ ಸಿಬಿಲ್ ಸ್ಕೋರ್ ಪರಿಶೀಲಿಸಲು ತಮ್ಮ ಕುಟುಂಬಕ್ಕೆ ಸಲಹೆ ನೀಡಿದ್ದಾರೆ.
ಸಿಬಿಲ್ ಸ್ಕೋರ್ ಮೂರು ಅಂಕಿಯ ಸಂಖ್ಯೆಯಾಗಿದ್ದು ಯಾವುದೇ ವ್ಯಕ್ತಿಯ ಸಾಲದ ಹಿಸ್ಟರಿಯನ್ನು ಸಾರಾಂಶ ರೂಪದಲ್ಲಿ ತೋರಿಸುತ್ತದೆ. ವರನ ಸಿಬಿಲ್ ಸ್ಕೋರ್ ನೋಡಿದಾಗ ಆತ ಸಾಲದಲ್ಲಿದ್ದು ಆರ್ಥಿಕವಾಗಿ ಸ್ಥಿರವಾಗಿಲ್ಲ ಅನ್ನುವ ಮಾಹಿತಿ ಸಿಕ್ಕಿದ್ದು ಮದ್ವೆಯನ್ನೇ ವಧುವಿನ ಕಡೆಯವರು ರಿಜೆಕ್ಟ್ ಮಾಡಿದ್ದಾರೆ.
ವರನಿಗೆ ಸಾಲದ ಹೊರೆ ಇದ್ರೆ ಹೆಂಡ್ತಿಯನ್ನು ಹೇಗೆ ಸಾಕ್ತಾನೆ...?
ಸಿಬಿಲ್ ಸ್ಕೋರ್ ಪರೀಕ್ಷಿಸಿದ ವಧುವಿನ ಚಿಕ್ಕಪ್ಪ ವರನಿಗೆ ಸಾಲದ ಹೊರೆಯೇ ಸಾಕಷ್ಟಿದೆ. ಹಾಗಿರುವಾಗ ಆತ ಹೆಂಡ್ತಿಯ ಅವಶ್ಯಕತೆಯನ್ನು ಹೇಗೆ ಪೂರೈಸುತ್ತಾನೆ, ಹೇಗೆ ಉತ್ತಮವಾಗಿ ನೋಡಿಕೊಳ್ಳುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದು ವಧುವಿನ ಕುಟುಂಬದವರು ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡಿದ್ದು ವಿವಾಹವನ್ನು ರದ್ದುಗೊಳಿಸಿದ್ದಾರೆ.